ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಕ್ರಿಸ್‌ಮಸ್ ಆಚರಣೆ

(ನ್ಯೂಸ್ ಕಡಬ) newskadaba.com ಕುಂತೂರು, ಡಿ. 26. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಕೋಣಾಲು ಸೈಂಟ್ ಜಾಕೋಬೈಟ್ ಚರ್ಚಿನ ಕೋರ್ ಎಪಿಸ್ಕೋಪಾ ರೆ| ಫಾ| ಪಿ.ಕೆ. ಅಬ್ರಹಾಂ ಅವರು ಉಪಸ್ಥಿತರಿದ್ದು ದೀಪ ಬೆಳಗಿಸಿ ಉದ್ಘಾಟಿಸಿದರು. ತದನಂತರ ಮಾತನಾಡುತ್ತಾ ಜಗತ್ತಿಗೆ ಶಾಂತಿ, ಸಹಬಾಳ್ವೆಯ ಸಂದೇಶವನ್ನು ಸಾರಿದ ಮಹಾನ್ ಮಾನವತಾವಾದಿ ಕ್ರೆöÊಸ್ತರ ಜೀವನ ಚರಿತ್ರೆ, ತ್ಯಾಗ ಮತ್ತು ಸಾಧನೆಗಳ ಕುರಿತು ತಿಳಿಸಿ, ಕ್ರಿಸ್‌ಮಸ್ ಹಬ್ಬದ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಯಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ವ್ಯವಸ್ಥಾಪಕರಾದ ವಂ|ಫಾ|ಡಾ| ಎಲ್ದೋ ಪುತ್ತೆನ್ ಕಂಡತ್ತಿಲ್ ಅವರು ಮಾತನಾಡಿ, ಜಗತ್ತಿನೆಲ್ಲೆಡೆ ಆಚರಿಸುತ್ತಿರುವ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಯ ಪ್ರಸ್ತುತತೆಯನ್ನು ವಿವರಿಸಿದರು. ಪ್ರಶಿಕ್ಷಣಾರ್ಥಿ ಸಿ| ಜಿನ್ಸಿ ಕೆ. ಜೆ ಅವರು ಕ್ರಿಸ್ಮಸ್ ಆಚÀರಣೆಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕ ಶ್ರೀ ಹರೀಶ್ ಕುಮಾರ್ ಟಿ ಹಾಗೂ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಮಾನಸ ಐ.ಎನ್. ಉಪಸ್ಥಿತರಿದ್ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಉಷಾ.ಎಂ.ಎಲ್. ಅವರು ಸ್ವಾಗತಿಸಿ, ಪ್ರಶಿಕ್ಷಣಾರ್ಥಿಗಳಾದ ಮಿನ್ಸಿ ಮ್ಯಾಥ್ಯೂ ಮತ್ತು ಸುನೇಹಾ ಬಾನು ವಂದಿಸಿದರು. ಕು| ಅನುಶ್ರೀ ಮತ್ತಿತರರು ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿಗಳಾದ ಕು| ದರ್ಶನ ಜೆ ಮತ್ತು ಕು| ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಶಿಕ್ಷಣಾರ್ಥಿಗಳು ಸಮೂಹ ಗಾಯನ, ಕಿರು ನೃತ್ಯ, ವಿನೂತನ ರೂಪಕಗಳನ್ನು ನಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.

error: Content is protected !!

Join the Group

Join WhatsApp Group