ಟೊಮೇಟೊ ಬೆಲೆಯಲ್ಲಿ ಭಾರಿ ಕುಸಿತ ➤ ರೈತರು ಕಂಗಾಲು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 26.  ಟೊಮೇಟೊ ದರ ಕುಸಿತವಾಗಿದ್ದು, ಚಿಲ್ಲರೆ ವ್ಯಾಪಾರದಲ್ಲಿ ಒಂದು ಕೆ.ಜಿ. ಗುಣಮಟ್ಟದ ಟೊಮೇಟೊ 8 ರಿಂದ 10 ರೂ.ಗೆ ಮಾರಾಟವಾಗುತ್ತಿದೆ. ಆದರೆ ಅದನ್ನು ಕಷ್ಟಪಟ್ಟು ಬೆಳೆದ ರೈತರಿಗೆ ಒಂದು ಕೆ.ಜಿಗೆ ಕೇವಲ 2 ರಿಂದ 3 ರೂಪಾಯಿ ಸಿಗುತ್ತಿದೆ. ತೈಲ ಬೆಲೆ, ಅಡುಗೆ ಎಣ್ಣೆ, ದಿನಸಿ ಕಾಳುಗಳ ಬೆಲೆ ದಿನೇ ದಿನೆ ಏರುತ್ತಿದೆಯಾದರೂ ಸೊಪ್ಪು ತರಕಾರಿಗಳ ಬೆಲೆಗಳು ಕೈಗೆಟುಕುವ ದರದಲ್ಲಿಯೇ ಉಳಿದಿವೆ. ಭಾರೀ ಮಳೆಯಿಂದಾಗಿ ಕಳೆದ ಕೆಲವು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದಿಢೀರ್‌ ಏರಿಕೆ ಕಂಡಿತ್ತು. ಆದರೆ ಇದೀಗ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

Also Read  ಶೀಘ್ರದಲ್ಲಿ ಹೈಕಮಾಂಡ್ ಸೇರಲಿದೆ ಅಭ್ಯರ್ಥಿಗಳ ಪಟ್ಟಿ..! 

 

 

 

error: Content is protected !!
Scroll to Top