ಮಂಗಳೂರು: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಹೆಚ್ಚಳ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 26. ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷಾಚರಣೆ ಸೇರಿದಂತೆ ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್‌ ಏರಿಕೆಯಾಗಿದ್ದು, ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಿದೆ.

ಮಂಗಳೂರು, ಉಡುಪಿಯ ಪ್ರಮುಖ ಹೊಟೇಲ್‌ಗ‌ಳ ಕೊಠಡಿಗಳು ಜನವರಿ ಮೊದಲ ವಾರದಲ್ಲೇ ಬುಕ್‌ ಆಗಿದ್ದು, ಹೋಂ ಸ್ಟೇಗಳು, ರೆಸಾರ್ಟ್‌ಗಳು, ಸರ್ವಿಸ್‌ ಅಪಾರ್ಟ್‌ಮೆಂಟ್‌ ಗಳೂ ಭರ್ತಿಯಾಗಿವೆ. ಇನ್ನು ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆ, ನ್ಯೂ ಇಯರ್ ಹಾಗೂ ಕ್ರಿಸ್ಮಸ್‌ ಆಚರಣೆ ಮೇಲೆ ನಿಯಂತ್ರಣ ಕ್ರಮಗಳಿದ್ದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮಯಾಗಿತ್ತು. ಆದರೆ ಈ ಬಾರಿ ಊರಿಗೆ ಮರಳಿರುವ ಅನಿವಾಸಿ ಭಾರತೀಯರು ಹಾಗೂ ಕ್ರಿಸ್ಮಸ್‌ ರಜೆಯ ಸುತ್ತಾಟಕ್ಕೆ ಆಗಮಿಸಿರುವಂತಹ ಕುಟುಂಬಗಳಿಂದಾಗಿ ಜನಸಂದಣಿ ಹೆಚ್ಚಿದೆ. ಮಂಗಳೂರು ನಗರದಲ್ಲಿರುವ ವಿವಿಧ ಶಾಪಿಂಗ್‌ ಮಾಲ್‌ಗ‌ಳು, ನಗರದ ಪ್ರಮುಖ ರೆಸ್ಟೋರೆಂಟ್‌ ಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದ್ದು, ಮೂಡುಬಿದಿರೆಯ ಸಾಂಸ್ಕೃತಿಕ ಜಾಂಬೂರಿ ನೋಡಲು ಬರುವವರ ಸಂಖ್ಯೆಯೂ ಅಧಿಕವಾಗಿದೆ.

Also Read  ಅಂತರ್ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪದವಿಪೂರ್ವ ಕಾಲೇಜು ಪ್ರಥಮ

error: Content is protected !!
Scroll to Top