(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 26. ಶನಿವಾರದಂದು ರಾತ್ರಿ ಕಾಟಿಪಳ್ಳದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಸುರತ್ಕಲ್ ಜಂಕ್ಷನ್‌ನಲ್ಲಿ ಪೊಲೀಸರು ಸೆಕ್ಷನ್ ಹಾಕಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ವಾಹನ ನಿಲುಗಡೆ, ಓಡಾಟ ಹಾಗೂ ಭಾನುವಾರದಂದು ಜಲೀಲ್ ಅವರ ಪಾರ್ಥಿವ ಶರೀರ ಕೊಂಡೊಯ್ಯಲು ಸುರತ್ಕಲ್ ಜಂಕ್ಷನ್ ನಲ್ಲಿ ಪೊಲೀಸರು ವಾಹನ ಸಂಚಾರ ನಿಷೇಧಿಸಿದ್ದು, ಸೋಮವಾರ ಬ್ಯಾರಿಕೇಡ್ ತೆರವುಗೊಳಿಸಿಲ್ಲ, ಪೊಲೀಸರ ಉಪಸ್ಥಿತಿಯೂ ಇಲ್ಲದೇ ವಾಹನ ಸವಾರರು ಪರದಾಡುವಂತಾಗಿದೆ. ಇಂದು ಸುರತ್ಕಲ್ ಜಂಕ್ಷನ್ ಬಂದ್ ಮಾಡಿರುವ ಕಾರಣ ವಾಹನ ದಟ್ಟಣೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.