ಟೆಂಟ್ ಹಾಕಿ ಮಲಗಿದ್ದವರ ಮೇಲೆ ಕಾಡಾನೆ ದಾಳಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮೂಡಿಗೆರೆ, ಡಿ. 26. ಪಶು ಆಸ್ಪತ್ರೆ ಸಮೀಪ ಟೆಂಟ್ ಹಾಕಿಕೊಂಡು ಮಲಗಿದ್ದ ಜನರ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ.


ಹಾಸನ ಜಿಲ್ಲೆಯ ಹಗರೇ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬವರು ಚಿಂದಿ ಆರಿಸಲು ಬಂದು, ಬಣಕಲ್ ಪಶು ಆಸ್ಪತ್ರೆಯ ಸಮೀಪ ಟೆಂಟ್ ಹಾಕಿಕೊಂಡು ಮಲಗಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ನಾಗವಲ್ಲಿ ಎಂಬವರಿಗೆ ಸೊಂಟ ಹಾಗೂ ಎದೆ ಭಾಗಕ್ಕೆ, ಗಂಡುಗುಸೆ ಅವರಿಗೆ ಕಾಲಿಗೆ ಪೆಟ್ಟಾಗಿದ್ದು, ಅವರನ್ನು ಮೂಡಿಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಬೆಳ್ಳಾರೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ➤ ಪೋಕ್ಸೋ ಪ್ರಕರಣ ದಾಖಲು

error: Content is protected !!
Scroll to Top