ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಸ್ಥಾಪಿಸಿದ ಜನಾರ್ಧನ ರೆಡ್ಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 25. ಮಾಜಿ ಸಚಿವ ಜನಾರ್ಧನ ರೆಡ್ಡಿ ಬಿಜೆಪಿಗೆ ಗುಡ್‌ಬೈ ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಇದೀಗ ಹೊಸ ಪಕ್ಷವನ್ನು ಸ್ಥಾಪಿಸಿದ ಜನಾರ್ದನ ರೆಡ್ಡಿಯವರು, ಅದಕ್ಕೆ “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಎಂದು ಹೆಸರಿಟ್ಟಿದ್ದು, ಈವರೆಗೆ ಬಿಜೆಪಿ ಪಕ್ಷದೊಂದಿಗಿದ್ದ ಎಲ್ಲಾ ನಂಟು ತೊರೆಯುವುದಾಗಿ ಹೇಳಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಕುರಿತು ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇಡೀ ತಮ್ಮ ಎರಡು ದಶಕದ ರಾಜಕೀಯ ಜೀವನದ ಆಗು-ಹೋಗುಗಳ ಬಗ್ಗೆ ವಿವರಿಸಿ, ಬಿಜೆಪಿ ತಮ್ಮನ್ನು ಕೆಲವು ವರ್ಷಗಳಿಂದ ನಡೆಸಿಕೊಂಡಿರುವುದಕ್ಕೆ ಬೇಸತ್ತು, ಇದೀಗ ಬಿಜೆಪಿಯಿಂದ ಹೊರಬಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವನ್ನು ಕಟ್ಟಿದ್ದೇನೆ. ಆ ಮೂಲಕ ಹೊಸ ಪಕ್ಷದ ಉದಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

Also Read  ಮಂಗಳೂರು : ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ.!

error: Content is protected !!
Scroll to Top