ಪುನೀತ್ ರಾಜ್‍ಕುಮಾರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ➤ ಪುನೀತ್ ಕೆರೆಹಳ್ಳಿಗೆ ಹಿಗ್ಗಾಮುಗ್ಗ ಥಳಿತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 25. ಕರ್ನಾಟಕ ರತ್ನ ಡಾ‌. ರಾಜ್‌ಕುಮಾರ್ ಕುಟುಂಬ ಹಾಗೂ ಪುನೀತ್ ರಾಜ್ ಕುಮಾರ್ ಕುರಿತು ಬೇಕಾಬಿಟ್ಟಿಯಾಗಿ ಮಾತಾಡಿದ್ದ ಆರೋಪಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿಗೆ ಕನ್ನಡಪರ ಹೋರಾಟಗಾರರು ಧರ್ಮದೇಟು ನೀಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಘಟನೆ ಬಗ್ಗೆ ದಿ. ಪುನೀತ್ ರಾಜಕುಮಾರ್ ವಿರುದ್ಧ ಪುನೀತ್ ಕೆರೆಹಳ್ಳಿ ಹಗುರವಾಗಿ ಮಾತನಾಡಿದ್ದ ಎಂದು ಕನ್ನಡಪರ ಹೋರಾಟಗಾರ ಶಿವಕುಮಾರ್ ಮತ್ತಿತರರು ಆರೋಪಿಸಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಆದರೆ ಪುನೀತ್ ಕೆರೆಹಳ್ಳಿ ಮಾತ್ರ ನಾನ್ಯಾಕೇ ಕ್ಷಮೆ ಕೇಳಲಿ ಎಂದು ಮೂಗಿನ ನೇರಕ್ಕೆ ಮಾತನಾಡಿದ್ದು, ಈ ಸಂದರ್ಭ ಮಾತಿಗೆ ಮಾತು ಬೆಳೆದು ಕನ್ನಡಪರ ಹೋರಾಟಗಾರರು ಕೆರೆಹಳ್ಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

Also Read  ಅಪಘಾತಗಳಿಂದ ಕೆಎಸ್‌ಆರ್‌ಟಿಸಿಗೆ ವಾರ್ಷಿಕ 100 ಕೋಟಿ ರೂ ನಷ್ಟ..!

error: Content is protected !!
Scroll to Top