ಕರ್ಕಶ ಸೈಲೆನ್ಸರ್ ಮೇಲೆ ರೋಡ್ ರೋಲರ್ ಹರಿಸಿ ನಾಶ  ➤ ಎಸ್.ಪಿ ಮಿಥುನ್ ಕುಮಾರ್‌                          

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಡಿ. 24. ನಗರದಲ್ಲಿ ಕರ್ಕಶ ಸೈಲೆನ್ಸರ್ ಗಳ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಪ್ರತಿದಿನ ನೂರಾರು ಗಾಡಿಗಳನ್ನ ಹಿಡಿಯುತ್ತಾರೆ. ಆದರೂ ಮಾಡಿಫೈಡ್ ಸೈಲೆನ್ಸರ್ ಹಾಕಿಕೊಂಡು ಕರ್ಕಶ ಧ್ವನಿ ಮಾಡಿಕೊಂಡು ಸುತ್ತುವವರು ಮಾತ್ರ ಕಡಿಮೆಯಾಗಿಲ್ಲ.

ಕಳೆದ ಒಂದು ತಿಂಗಳಿನಲ್ಲಿ ಎಸ್ ಪಿ ಮಿಥುನ್ ಕುಮಾರ್‌ ಆದೇಶದಂತೆ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರ ಹಾಗೂ ಉಪವಿಭಾಗದಲ್ಲಿ ಸೈಲೆನ್ಸರ್ ಹಾವಳಿ ತಡೆಯುವ ಅಭಿಯಾನ ಆರಂಭವಾಗಿದೆ. ಈ ತನಕ ವಶಕ್ಕೆ ಪಡೆದ ಸೈಲೆನ್ಸ್ ರ್ ಗಳು ಹಾಗೂ ಶ್ರಿಲ್ ಹಾರ್ನ್ ಗಳನ್ನ ಸಾರ್ವಜನಿಕರ ಎದುರೇ ರೋಡ್ ರೋಲರ್ ಹತ್ತಿಸಿ ನಾಶಪಡಿಸಲಾಗಿದೆ ಎಂದು ತಿಳಿದುಬಂದಿದೆ.

Also Read  ಮಾಂಸದಂಗಡಿ ಮಾಲೀಕನ ಮೇಲೆ ತಲವಾರು ದಾಳಿ ಪ್ರಕರಣ ➤ ಮೂವರು ಶಂಕಿತ ಆರೋಪಿಗಳು ವಶಕ್ಕೆ

 

error: Content is protected !!
Scroll to Top