ಬ್ಲೂವೇಲ್ ನಂತರ ಇದೀಗ ಧಾರವಾಹಿ ಸರದಿ ► ಧಾರವಾಹಿ ನೋಡಿ ಮೈಗೆ ಬೆಂಕಿ ಹಚ್ಚಿಕೊಂಡ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ದಾವಣಗೆರೆ, ನ.30. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ 07 ವರ್ಷದ ಬಾಲಕಿಯೊಬ್ಬಳು ಬಟ್ಟೆಗೆ ಬೆಂಕಿ ಹಚ್ಚಿಕೊಂಡು ಸಂಪೂರ್ಣ ಬೆಂದು ನರಳಿ ನರಳಿ ದಾರುಣ ಅಂತ್ಯಕಂಡ ಘಟನೆ ಇಲ್ಲಿನ ಹರಿಹರದಲ್ಲಿ ನಡೆದಿದ್ದು, ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸಣ್ಣ ವಯಸ್ಸಿನ ಮಕ್ಕಳಿಗೆ ಟಿವಿ, ಮಾಧ್ಯಮಗಳಲ್ಲಿ ಬರುವ ಕೆಲ ದೃಶ್ಯಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ದುರಂತ ಸಾಕ್ಷಿ. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ  7 ವರ್ಷ ದ ಬಾಲಕಿಯೊಬ್ಬಳು ಬಟ್ಟೆಗೆ ಬೆಂಕಿ ಹಚ್ಚಿಕೊಂಡು  ಬೆಂದು ನರಳಿ ನರಳಿ ದಾರುಣ ಅಂತ್ಯಕಂಡ ಘಟನೆ ಹರಿಹರದಲ್ಲಿ ನವೆಂಬರ್‌ 11 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Also Read  ಛತ್ತೀಸಗಢದ ಗರಿಯಾಬಂದ್‌ನಲ್ಲಿ ಎನ್‌ಕೌಂಟರ್: ಭದ್ರತಾ ಪಡೆಗಳ ಗುಂಡಿಗೆ 14 ಮಂದಿ ನಕ್ಸಲರ ಹತ್ಯೆ

ಹರಿಹರದ ಆಶ್ರಯ ಕಾಲೋನಿಯ ಮಂಜುನಾಥ ಮತ್ತು ಚೈತ್ರಾ ದಂಪತಿಯ ಪುತ್ರಿ ಪ್ರಾರ್ಥನಾ ಎಂಬಾಕೆ ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭಯಾನಕ ದೃಶ್ಯಗಳುಳ್ಳ ಧಾರಾವಾಹಿಯನ್ನು ನೋಡಿ ದೃಶ್ಯವನ್ನು ಅನುಕರಿಸಿ ನವೆಂಬರ್ 11 ರಂದು ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿ ಹಚ್ಚಿಕೊಂಡ ವಿಚಾರ ತಿಳಿದ ತಕ್ಷಣ ಸಂಬಂಧಿಕರು ಮತ್ತು ಸ್ಥಳೀಯರು ಪ್ರಾರ್ಥನಾಳನ್ನು ಹರಿಹರದ ಆಸ್ಪತ್ರೆಗೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಮರುದಿನ ಸಾವನ್ನಪ್ಪಿದ್ದಾಳೆ.

‘ಮುಂದೆ ಯಾವ ಮಕ್ಕಳೂ ಈ ರೀತಿ ಮಾಡಿಕೊಳ್ಳಬಾರದು. ಈ ಬಗ್ಗೆ ಅರಿವು ಮೂಡಬೇಕು ಮತ್ತು ಪೋಷಕರು ಎಚ್ಚರಿಕೆ ವಹಿಸಬೇಕು’ ಎನ್ನುವ ಸದುದ್ದೇಶದೊಂದಿಗೆ ಈ ವಿಚಾರವನ್ನು ಪ್ರಾರ್ಥನಾಳ ಪೋಷಕರು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.

Also Read  ಕಾರ್ಕಳ : ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವೃದ್ದೆ

error: Content is protected !!
Scroll to Top