(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ. 24. ನಗರದ ಗೋಶಾಮಹಲ್ ಪ್ರದೇಶದಲ್ಲಿ ರಸ್ತೆಯೊಂದು ದಿಢೀರ್ ಕುಸಿದ ಪರಿಣಾಮ ವಾಹನಗಳು, ಹಣ್ಣು, ತರಕಾರಿ ತುಂಬಿದ್ದ ಚೀಲಗಳು ಮಣ್ಣಿನಡಿ ಸಿಲುಕಿಕೊಂಡ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಗೋಶಾಮಹಲ್ ಪ್ರದೇಶದಲ್ಲಿ ಚರಂಡಿಯ ಮೇಲೆ ರಸ್ತೆ ನಿರ್ಮಿಸಲಾಗಿದ್ದು, ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡುತ್ತಿದ್ದ ಜನರು ಈ ಭೂಕುಸಿತದಿಂದಾಗಿ ನೆಲಕ್ಕೆ ಬಿದ್ದಿದ್ದಾರೆ. ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಸಿಕೊಂಡಿದ್ದು ರಸ್ತೆ ಮಧ್ಯೆ ಒಡೆದುಹೋಗಿದೆ. ಹಣ್ಣುಗಳು ಮತ್ತು ತರಕಾರಿಗಳನ್ನು ತುಂಬಿದ ಚೀಲಗಳು ಹೊಂಡದಲ್ಲಿ ಹೂತುಹೋಗಿದ್ದು, ರಸ್ತೆಯಲ್ಲಿ ನಿಂತಿದ್ದ ವಾಹನಗಳೂ ಹೊಂಡಕ್ಕೆ ಬಿದ್ದಿವೆ. ಅಪಘಾತದ ವೇಳೆ ರಸ್ತೆಯಲ್ಲಿ ನಿಂತಿದ್ದ ಹಲವರು ಗುಂಡಿಗೆ ಬಿದ್ದಿದ್ದು, ನಂತರ ಅವರನ್ನು ರಕ್ಷಿಸಲಾಗಿದೆ.