ಒಂದೇ ಭೂಮಿಗೆ ಡಬಲ್ ಪರಿಹಾರ  ➤ ಸರ್ಕಾರಕ್ಕೆ 19.99 ಕೋಟಿ ರೂ. ವಂಚನೆ       

(ನ್ಯೂಸ್ ಕಡಬ) newskadaba.com ಧಾರವಾಡ, ಡಿ. 24. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ವಶಪಡಿಸಿಕೊಂಡ ಜಮೀನಿಗೆ ಎರಡೆರಡು ಬಾರಿ ಪರಿಹಾರ ನೀಡಿ ಸರಕಾರಕ್ಕೆ 19.99 ಕೋಟಿ ರೂ. ವಂಚಿಸಿದ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದಿದ್ದು, ರೈತರ ಹೆಸರಿನಲ್ಲಿ ಈ ಅಕ್ರಮ ನಡೆದಿದೆಯಾದರೂ ರೈತ ಫಲಾನುಭವಿಗಳಿಗೆ ತಮ್ಮ ಖಾತೆ ಮೂಲಕ ಇಷ್ಟೊಂದು ಹಣ ವರ್ಗಾವಣೆ ಆಗಿದೆ ಎಂಬುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಧಾರವಾಡ ಕೆಐಎಡಿಬಿಯಲ್ಲಿ ನಡೆದ ಈ ಹಗರಣವು ಇದೀಗ ಸರಕಾರವನ್ನು ಮುಜುಗರಗೊಳಿಸಿದೆ. 2011-12ರಲ್ಲಿ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಸರಕಾರ 2012-14ರ ಅವಧಿಯಲ್ಲಿ ಪರಿಹಾರ ಬಿಡುಗಡೆ ಮಾಡಿತ್ತು. ಆದರೆ 2021-22ನೇ ಸಾಲಿನಲ್ಲಿ ಸುಮಾರು 80 ಎಕರೆ ಜಮೀನಿಗೆ ಕೆಐಎಡಿಬಿ ಅಧಿಕಾರಿಗಳು ಬ್ಯಾಂಕ್ ಖಾತೆಗಳ ಮೂಲಕವೇ ಎರಡನೇ ಬಾರಿ 19,99,55,000 ರೂ. ಪರಿಹಾರ ಜಮೆ ಮಾಡಿದ್ದಾರೆ. ಆದರೆ ಇದು ಫಲಾನುಭವಿಗಳಿಗೆ ಗೊತ್ತಾಗದ ಹಾಗೆ ಅವರ ಹೆಸರಿನಲ್ಲಿಯೇ ನಕಲಿ ಅಕೌಂಟ್ ತೆರೆದು ಹಣ ನುಂಗಿರುವುದು ಎಲ್ಲರನ್ನು ಗೊಂದಲಕ್ಕೀಡು ಮಾಡಿದೆ.

Also Read  ನೆಲ್ಯಾಡಿ: ಟಾಟಾ ಏಸ್ ಹಾಗೂ ಸಿಲಿಂಡರ್ ಸಾಗಾಟದ ಲಾರಿ ನಡುವೆ ಅಪಘಾತ ➤ ಓರ್ವ ಗಂಭೀರ.!

 

error: Content is protected !!
Scroll to Top