ಉಪ್ಪಿನಂಗಡಿ: ಡಾ.ಸುಪ್ರೀತ್ ಲೋಬೋರವರಿಗೆ ಆಯುರ್ವೇದದಲ್ಲಿ ಪಿಎಚ್‌.ಡಿ ಪದವಿ                                                                                                                                        

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 24. ಇಲ್ಲಿನ ಡಾ.ಕೆ.ಜಿ.ಭಟ್ ಬಿಲ್ಡಿಂಗ್‌ ನಲ್ಲಿ ಜೊಸ್ಸೀಸ್ ಆಯುರ್ವೇದ ಆಸ್ಪತ್ರೆ ಮತ್ತು ನೆಕ್ಕಿಲಾಡಿಯಲ್ಲಿ ಬಳ್ಳಿ ಆಯುರ್ಗ್ರಾಮ ಆಯುರ್ವೇದ ಆಸ್ಪತ್ರೆ ಹೊಂದಿರುವ ಡಾ. ಸುಪ್ರೀತ್ ಲೋಬೋ ಅವರು ಭುವನೇಶ್ವರದ ಉತ್ಕಲ ವಿಶ್ವವಿದ್ಯಾನಿಲಯದಿಂದ ಆಯುರ್ವೇದದಲ್ಲಿ ಪಿಎಚ್‌.ಡಿ ಪದವಿ ಗಳಿಸಿದ್ದಾರೆ.

ಡಾ. ಚತುರ್ಭುಜ ಭುಯಾನ್ A COMPARATIVE CLINICAL STUDY OF AGNIKARMA WITH SUVARN SHALAKA AND PANCHADHATU SHALAKA IN JANUSANDHIGATA VATA W.S.R. TO OSTEOARTHRITIS OF KNEE JOINT ಎಂಬ ಮಹಾ ಪ್ರಬಂಧ ಮಂಡಿಸಿ ಆಯುರ್ವೇದದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಮೊಣಗಂಟು ನೋವಿನ ಮೇಲೆ ಸಂಶೋಧನೆ ನಡೆಸಿದ್ದ ಸುಪ್ರೀತ್ ಅವರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ನೆಲ್ಯಾಡಿಯ ಜ್ಞಾನೋದಯ ಬೆಥನಿಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಡೆದಿದ್ದರು. ಹಾಸನದ ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬಿಎಎಂಎಂಎಸ್ ಪದವಿ ಪಡೆದಿದ್ದರು. ಎನೆಸ್ಸೆಸ್‌ನಲ್ಲಿ ಸಕ್ರಿಯರಾಗಿದ್ದ ಅವರು 2008ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕೆಡೆಟ್ ಆಗಿ ಭಾಗವಹಿಸಿದ್ದರು.

Also Read  ಧರ್ಮಸ್ಥಳ: ಕಾಡಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಎಂ.ಎಸ್. (ಆಯು) ಸ್ನಾತಕೋತ್ತರ ಪದವಿಯನ್ನು ವಿಶ್ವದಲ್ಲೇ ಆಯುರ್ವೇದದ ಅಗ್ರಗಣ್ಯ ಸಂಸ್ಥೆಯಾದ ಗುಜರಾತ್‌ನ ಜಾಮ್‌ ನಗರದಲ್ಲಿರುವ ಇನ್ಸ್‌ ಟಿಟ್ಯೂಟ್ ಆಫ್ ನ್ಯಾಶನಲ್ ಇಂಪಾರ್ಟೆನ್ಸ್ (ಐಟಿಆರ್‌ಎ) ಎಂಎಸ್ (ಆಯು) ಜನರಲ್ ಮೆರಿಟ್‌ನಲ್ಲಿ ಪಡೆದಿರುವ ಅವರು ಪಿಜಿಡಿವೈಎನ್, ಯೋಗ ಮತ್ತು ನ್ಯಾಚುರೋಪತಿಯಲ್ಲಿ ಎರಡು ವರ್ಷದ ಪಿಜಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ. ಡಾ. ಸುಪ್ರಿತ್ ಅವರು 34-ನೆಕ್ಕಿಲಾಡಿ ಗ್ರಾಮದ ಬಳ್ಳಿ ನಿವಾಸಿ ದಿವಂಗತ ಜೊಸ್ಸಿ ಲೋಬೊ ಮತ್ತು ಐರಿನ್ ಲೋಬೊ ದಂಪತಿಯ ಪುತ್ರ.

Also Read  ವರದಕ್ಷಿಣೆಯಾಗಿ 'ಹಳೆಯ' ಪೀಠೋಪಕರಣ ನೀಡಿದಕ್ಕೆ ಮದುವೆ ರದ್ದುಗೊಳಿಸಿದ ವರ..!

error: Content is protected !!
Scroll to Top