ನೆಲ್ಯಾಡಿ: ದನದ ಮಾಂಸ ಮಾರಾಟ…! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ. 24. ಇಲ್ಲಿನ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ದನದ ಮಾಂಸ ಮಾರಾಟ ಮಾಡಿ, ಅದರ ತಲೆ ಹಾಗೂ ಕಾಲುಗಳನ್ನು ಸ್ಥಳದಲ್ಲೇ ಬಿಟ್ಟುಹೋಗಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.


ಬಂಧಿತ ಆರೋಪಿಯನ್ನು ಶಿರಾಡಿ ಗ್ರಾಮದ ಅಡ್ಡಹೊಲೆ ಮಿತ್ತಮಜಲು ನಿವಾಸಿ ತೋಮಸ್ ಯಾನೆ ಮನೋಜ್ ಎಂದು ಗುರುತಿಸಲಾಗಿದೆ. ಸಿರಿಬಾಗಿಲು ಗ್ರಾಮದ ದೇರಣೆ ಅರಣ್ಯ ಪ್ರದೇಶದಲ್ಲಿ ದನದ ಮಾಂಸ ಕಡಿದು ಅದರ ತಲೆ ಹಾಗೂ ಕಾಲುಗಳನ್ನು ಸ್ಥಲದಲ್ಲೆ ಬಿಟ್ಟು ಹೋಗಲಾಗಿದ್ದು, ಈ ಕುರಿತು ಕಾರಯಾಚರಣೆ ನಡೆಸಿದ ಪೊಲೀಸರು ಆರೋಪಿ ತೋಮಸ್ ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಆರೋಪಿ ರಬ್ಬರ್ ಕಳ್ಳತನ ಹಾಗೂ ಇತರೆ ಹಲವು ಪ್ರಕರಣದ ಆರೋಪಿಯಾಗಿದ್ದಾನೆ ಎನ್ನಲಾಗಿದೆ.

Also Read  ರಾಜ್ಯ ಸರಕಾರಿ ನೌಕರರ ಸಂಘ ➤ ಚುನಾವಣೆಗೆ ನಾಮಪತ್ರ ಸಲ್ಲಿಕೆ

error: Content is protected !!
Scroll to Top