(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.28. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯಿಂದ ಅಡುಗೆ ಎಣ್ಣೆಗಳನ್ನು ಕಳವುಗೈದಿರುವ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ.
ಅಡುಗೆ ಎಣ್ಣೆಯ ಬಾಕ್ಸ್ ಗಳನ್ನು ಲೋಡ್ ಮಾಡಿ ರಾತ್ರಿ ವೇಳೆ ಉದನೆಯಲ್ಲಿ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಚಾಲಕ ನಿದ್ದೆ ಮಾಡಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ ಎದ್ದು ನೋಡುವಾಗ ಲೋಡ್ ಮಾಡಿ ಮುಚ್ಚಲಾಗಿದ್ದ ಟಾರ್ಪಾಲನ್ನು ಹರಿದು ಲಾರಿಯಿಂದ ನೂರಕ್ಕೂ ಅಧಿಕ ಎಣ್ಣೆಯ ಬಾಕ್ಸ್ ಗಳನ್ನು ಕದಿಯುವ ಮೂಲಕ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಘಟನೆಯ ಸಂಬಂಧ ಲಾರಿ ಚಾಲಕ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.