ಅಕ್ರಮ ಹಣ ವರ್ಗಾವಣೆ ಪ್ರಕರಣ ➤ ಎರಡು ವರ್ಷದ ಬಳಿಕ ಕೇರಳ ಪತ್ರಕರ್ತನ ಬಿಡುಗಡೆ..!

(ನ್ಯೂಸ್ ಕಡಬ) newskadaba.com ಅಲಹಾಬಾದ್, ಡಿ. 24. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರು ಎರಡು ವರ್ಷಗಳ ಬಳಿಕ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 

ಕಪ್ಪನ್ ವರದಿಗಾರ ಮತ್ತು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್(ಕೆಯುಡಬ್ಲ್ಯುಜೆ)ನ ದೆಹಲಿ ಘಟಕದ ಕಾರ್ಯದರ್ಶಿಯಾಗಿದ್ದ ಇವರು, 2020ರ ಅಕ್ಟೋಬರ್‌ನಲ್ಲಿ ದಲಿತ ಮಹಿಳೆಯ ಅತ್ಯಾಚಾರ ಮತ್ತು ಹತ್ಯೆಯ ವರದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿತ್ತು. ಇಡಿ ಪ್ರಕರಣದಲ್ಲಿ ಲಖನೌ ನ್ಯಾಯಾಲಯವು ಜಾಮೀನು ನಿರಾಕರಿಸಿದ ನಂತರ ಕಪ್ಪನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಕುಮಾರ್ ಸಿಂಗ್ ಅವರ ಏಕ ಸದಸ್ಯ ಪೀಠ ಆರೋಪಿಗೆ ಜಾಮೀನು ನೀಡಿತ್ತು. ಈಗ ಎರಡು ವರ್ಷಗಳ ನಂತರ  ಕೇರಳ ಹೈಕೋರ್ಟ್ ಸಿದ್ದಿಕ್ ಬಿಡುಗಡೆಗೊಳಿಸಿ ತಿರ್ಪು ನೀಡಿದೆ.

Also Read  ಕಾಫಿ ಬೆಳೆಗಾರರಿಗೆ 6,590 ಕೋಟಿ ರೂ. ಬಿಡುಗಡೆ   ➤ ಆರ್.ಅಶೋಕ್

error: Content is protected !!
Scroll to Top