ಗ್ರಾಹಕನ ಸೋಗಿನಲ್ಲಿ ಬಂದು ಆರು ಲಕ್ಷ ರೂ. ನಗದು ದೋಚಿ ಪರಾರಿ..!

(ನ್ಯೂಸ್ ಕಡಬ) newskadaba. com ಕಾಪು, ಡಿ. 24. ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮಹಾಲಸಾ ಟ್ರೇಡರ್ಸ್ ಹಾಲಿನ ಅಂಗಡಿಗೆ ಹಾಲು ಖರೀದಿ ನೆಪದಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ನಾಲ್ವರು ಮಾಲಕನಿಂದ ಆರು ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

 

ಅಂಗಡಿ ಮಾಲಕ ರಾತ್ರಿ ವೇಳೆ ಬೀಗ ಹಾಕಿ ಮನೆಗೆ ತೆರಳಲು ಸಿದ್ಧರಾಗಿ 4 ದಿನದ ವ್ಯವಹಾರದ ಸುಮಾರು 6 ಲಕ್ಷ ರೂ. ನಗದನ್ನು ಸ್ಕೂಟಿಯಲ್ಲಿ ಇರಿಸಿದ್ದರು. ಈ ವೇಳೆ ಗ್ರಾಹಕನ ಸೋಗಿನಲ್ಲಿ ಬಂದ ನಾಲ್ವರು ಅಪರಿಚಿತರಲ್ಲಿ ಓರ್ವ ಈ ದುಷ್ಕೃತ್ಯವೆಸಗಿದ್ದಾನೆ. ನಾಲ್ವರ ಪೈಕಿ ಒಬ್ಬಾತ ಬಂದು ಹಾಲಿನ ಪ್ಯಾಕೆಟ್ ಕೇಳಿದ್ದು ಉಳಿದವರು ದೂರದಲ್ಲಿ ನಿಂತು ಇನ್ನು ಸ್ಕೂಟರ್ ನ ಟಯರ್ ಪಂಕ್ಚರ್ ಮಾಡಿ , ಅದರ ಕೀ ಬಳಸಿ ಸೀಟಿನ ಕೆಳಗೆ ಇಟ್ಟಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆರು ಲಕ್ಷ ರೂ. ಹಣವನ್ನು ಎಗರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಬೆರಳಚ್ಚು, ಶ್ವಾನದಳ ಸಹಿತ ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Also Read  ಈ 8 ರಾಶಿಯವರಿಗೆ ಶುಭಫಲ, ಕಂಕಣ ಭಾಗ್ಯ, ದಾಂಪತ್ಯದಲ್ಲಿನ ಕಲಹ, ವ್ಯಾಪಾರ ಅಭಿವೃದ್ಧಿ ಸುಧಾರಿಸುತ್ತದೆ

error: Content is protected !!
Scroll to Top