ದಶಪಥ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ  ➤ ಮೂವರು ಮೃತ್ಯು       

(ನ್ಯೂಸ್ ಕಡಬ) newskadaba.com ಚನ್ನಪಟ್ಟಣ, ಡಿ. 24. ರಸ್ತೆ ಅಪಘಾತವುಂಟಾದ ಪರಿಣಾಮ ಮೂವರು ಸ್ಥಳದಲ್ಲೇ 3 ಮೃತಪಟ್ಟು ಹಲವರಿಗೆ ಗಾಯಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ದಶಪಥ ಹೆದ್ದಾರಿಯಲ್ಲಿ ಸಂಭವಿಸಿದೆ.

ತಿರುಪತಿಯಿಂದ ಹಿಂದಿರುಗುತ್ತಿದ್ದ ಟಿಟಿ ವಾಹನವು ಚನ್ನಪಟ್ಟಣದ ಮುದಗೆರೆ ಗೇಟ್ ಬಳಿ ಕ್ಯಾಂಟರ್‌ಗೆ ಡಿಕ್ಕಿಯಾಗಿದ್ದು, ಪರಿಣಾಮ ಟಿಟಿ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

 

 

error: Content is protected !!
Scroll to Top