ಹಾವು ಕಡಿತ ➤ ಆಂಬ್ಯುಲೆನ್ಸ್ ಸಿಗದೇ ಓರ್ವ ಮೃತ್ಯು   

(ನ್ಯೂಸ್ ಕಡಬ) newskadaba.com ಹಾಸನ, ಡಿ. 24. ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ಸಂಭವಿಸಿದೆ.

ಮೃತ ಬಾಲಕನನ್ನು ದೊಡ್ಡಕಲ್ಲೂರು ಗ್ರಾಮದ ಯಶವಂತ್-ಗೌರಿ ಎಂಬುವವರ ಪುತ್ರ ರೋಷನ್ (4) ಎಂದು ಗುರುತಿಸಲಾಗಿದೆ. ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆ ತರಲೆಂದು ಮನೆಗಳಿಗೆ ತರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ವಿಷಯ ತಿಳಿದ ಕುಟುಂಬಸ್ಥರು ರೋಷನ್‍ ನನ್ನು ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಕ್‍ ನಲ್ಲಿ ಕರೆ ತಂದರಾದರೂ, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಸಕಲೇಶಪುರ ಪಟ್ಟಣ್ಣದ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಅಂಬುಲೆನ್ಸ್ ಗೆ ಕರೆ ಮಾಡಿದ್ದು,  ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೆ ಹೋದುದರಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ನಂದಿನಿ ಹಾಲಿನ ವಾಹನ ಡಿಕ್ಕಿ► ನೂರಾರು ಹಾಲಿನ ಪ್ಯಾಕೆಟ್ ಮಣ್ಣುಪಾಲು...!!!

 

 

error: Content is protected !!
Scroll to Top