ಕಡಬ: ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Death, deadbody, Waterfall

(ನ್ಯೂಸ್ ಕಡಬ) newskadaba.com ಕಡಬ, ಡಿ.23. ವಿವಾಹಿತ ಮಹಿಳೆಯೋರ್ವರು ಮನೆಯ ಮೇಲ್ಛಾವಣಿಗೆ ಚೂಡಿದಾರದ ಬಟ್ಟೆ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ಗುರುವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ನೂಜಿಬಾಳ್ತಿಲ ಗ್ರಾಮದ ಪದ್ಮನಾಭ ಎಂಬವರ ಪತ್ನಿ ಚೆಲುವಮ್ಮ ಯಾನೆ ಚಿತ್ರಾ (37) ಎಂದು ಗುರುತಿಸಲಾಗಿದೆ. ಪದ್ಮನಾಭ ಅವರು ಹೊಸ ಮನೆಯ ಕೊಟ್ಟಿಗೆ ಕಟ್ಟಿಸಿದ್ದು, ಮನೆ ಕೊಟ್ಟಿಗೆಯ ವಾಸ್ತು ಸರಿಯಾಗಿಲ್ಲ ಎಂದು ಕೊಟ್ಟಿಗೆಯನ್ನು ಬೀಳಿಸಿ ಪುನಃ ಕಟ್ಟಿದ್ದರು. ಕೊಟ್ಟಿಗೆ ಕಟ್ಟುವ ವಿಚಾರದಲ್ಲಿ ಚಿತ್ರಾ ಅವರು ಕೊರಗುತ್ತಿದ್ದು, ಇದರಿಂದಾಗಿ ದುಡುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Also Read  ‘ಕರಿಮಣಿ ಮಾಲಿಕ ನೀನಲ್ಲ’ ರೀಲ್ಸ್ ಎಫೆಕ್ಟ್ - ಪತಿ ಆತ್ಮಹತ್ಯೆ

error: Content is protected !!
Scroll to Top