ಸಿಲಿಕಾನ್ ಸಿಟಿಯಲ್ಲಿ ಮತ್ತೆ ಘರ್ಜಿಸಿದ ಜೆಸಿಬಿ, ಅಕ್ರಮ ಒತ್ತುವರಿ ತೆರವು ಮಾಡಿದ BBMP                                        

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.23   ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಬೃಹತ್ ಬೆಂಗಳೂರು ಮಹಾನಗರ  ಪಾಲಿಕೆಯ ಜೆಸಿಬಿಗಳು ಕಾರ್ಯಾಚರಣೆಗಿಳಿದಿದ್ದು, ಒಂದೂವರ ತಿಂಗಳ ಬಳಿಕ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿವೆ ಎಂದು ತಿಳಿದುಬಂದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಮುಂದುವರಿದಿದ್ದು, ಅನೇಕ ಕಡೆಗಳಲ್ಲಿ ಬುಲ್ಡೋಜರ್‌ಗಳು ಸದ್ದು ಮಾಡಿವೆ. ಒಟ್ಟು ಆರು ಕಡೆ ಒತ್ತುವರಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಹೈಕೋರ್ಟ್ ತಡೆಯಾಜ್ಞೆ ನೀಡಿದ ನಂತರ ಪಾಲಿಕೆಯು ಅಕ್ಟೋಬರ್ 10 ರಂದು ಚಾಲನೆಯನ್ನು ಸ್ಥಗಿತಗೊಳಿಸಿತ್ತು ಎನ್ನಲಾಗಿದೆ.

Also Read  ನಿರುದ್ಯೋಗದಿಂದ ಮನನೊಂದು ಯುವತಿಯೋರ್ವಳು ಆತ್ಮಹತ್ಯೆ

 

 

 

error: Content is protected !!
Scroll to Top