ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ಮತ್ತೆ ಆರ್ಭಟ

(ನ್ಯೂಸ್ ಕಡಬ) newskadaba.com  ನವದೆಹಲಿ, ಡಿ.23  ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ಮತ್ತೆ ಆರ್ಭಟ ಮುಂದುವರೆಸುತ್ತಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಭಾರತ್ ಬಯೋಟೆಕ್ ನ ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಈಗಾಗಲೇ ಅನುಮೋದನೆ ನೀಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ಇದನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಈ ನಾಸಲ್ ಲಸಿಕೆಗೆ ದರ ನಿಗದಿಪಡಿಸುವ ಕಾರ್ಯ ನಡೆಯುತ್ತಿದ್ದು, ಬಳಿಕ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇಂದು ಸಂಜೆ ವೇಳೆಗೆ ಈ ನಾಸಲ್ ವ್ಯಾಕ್ಸಿನ್ ಅನ್ನು ಕೋವಿನ್  ಆ್ಯಪ್ ವ್ಯವಸ್ಥೆಗೆ ಸೇರಿಸುವ ಕೆಲಸವಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Also Read  ವಿಮಾನ ಪತನ  19 ಮಂದಿ ಸಜೀವ ದಹನದ ಶಂಕೆ

 

 

 

error: Content is protected !!
Scroll to Top