ಮರ್ಧಾಳ: ಡೆಂಗ್ಯೂ ಮಾಹಿತಿ ಜನಜಾಗೃತಿ ಜಾಥಾ

(ನ್ಯೂಸ್ ಕಡಬ) newskadaba.com ಕಡಬ, ಜೂ.14. ಸಮುದಾಯ ಆರೋಗ್ಯ ಕೇಂದ್ರ ಕಡಬ, ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ ಮತ್ತು ಗ್ರಾಮ ಪಂಚಾಯತ್ ಮರ್ಧಾಳ ಹಾಗೂ ಸೈಂಟ್ ಮೇರಿಸ್ ಪ್ರೌಢ ಶಾಲೆ ಮರ್ಧಾಳ ಇದರ ಸಹಯೋಗದೊಂದಿಗೆ ಆರೋಗ್ಯ ಮಾಹಿತಿ ಜನಜಾಗೃತಿ ಜಾಥಾವು ಮರ್ಧಾಳದಲ್ಲಿ ನಡೆಯಿತು.
ಮರ್ಧಾಳ ಸೈಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ಆರೋಗ್ಯ ಮಾಹಿತಿಯ ಕರಪತ್ರ ಬಿಡುಗಡೆ ಮಾಡುವ ಮೂಲಕ ಐತ್ತೂರು ತಾ.ಪಂ. ಸದಸ್ಯರಾದ ಪಿ.ವೈ. ಕುಸುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಮಾತನಾಡಿ, ಈಗಾಗಲೇ ಮರ್ಧಾಳ ಪರಿಸರದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಡೆಂಗ್ಯು ಜ್ವರ ಕಾಣಿಸಿಕೊಂಡಿದ್ದು. ಈ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪರಿಸರ ಸ್ವಚ್ಛವಾಗಿಡುವುದರೊಂದಿಗೆ ಅಲ್ಲಲ್ಲಿ ಗುಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಮನೆ ಪಕ್ಕದಲ್ಲಿ ಪಾತ್ರೆಗಳಲ್ಲಿ ಮಳೆನೀರು ಶೇಖರಣೆಗೊಳ್ಳದಂತೆ ಪಾತ್ರೆ ಕವಚಿಡುವುದು, ಸೀಯಾಳ ಸಿಪ್ಪೆ, ಪ್ಲಾಸ್ಟಿಕ್ಗಳನ್ನು ಹಾಕದಂತೆ ಜಾಗ್ರತೆ ವಹಿಸುವುದು, ತ್ಯಾಜ್ಯ, ಕಸಕಡ್ಡಿ ಕೊಳೆತ ಪದಾರ್ಥಗಳನ್ನು ಅಲ್ಲಲ್ಲಿ ಬೀಸಾಡದೆ ತ್ಯಾಜ್ಯ ವಿಲೇವಾರಿ ಮಾಡುವುದು. ರಸ್ತೆ ಚರಂಡಿಗಳನ್ನು ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವುದು. ಸೇರಿದಂತೆ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಲ್ಲಾ ರೀತಿಯ ಮುಂಜಾಗ್ರತೆ ವಹಿಸಬೇಕೆಂದು ಮಾಹಿತಿ ನೀಡಿದ ಅವರು ಯಾರಿಗಾದರೂ ತಲೆನೋವು, ಚಳಿಜ್ವರ ಕಂಡುಬಂದಲ್ಲಿ ಕೂಡಲೇ ನಮ್ಮ ಆರೋಗ್ಯ ಕೇಂದ್ರದಲ್ಲಿ ಬಂದು ಚಿಕಿತ್ಸೆ ಪಡೆಯಬೇಕು. ಅಲ್ಲದೆ ಸ್ಥಳೀಯ ಆರೋಗ್ಯ ಸಹಾಯಕಿಗೆ ತಿಳಿಸಬೇಕೆಂದು ಹೇಳಿದರು.

Also Read  ಆತ್ಮಹತ್ಯೆಗೆ ಶರಣಾದ ಮಗ..!  ಶವದ ಮುಂದೆ ಕಣ್ಣೀರಿಡುತ್ತಾ ಮೃತಪಟ್ಟ ತಾಯಿ..!

ಈ ಸಂದರ್ಭದಲ್ಲಿ ಮರ್ಧಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ರೈ ಮೈಕಾಜೆ, ಕುಟ್ರುಪ್ಪಾಡಿ ತಾ.ಪಂ. ಸದಸ್ಯರಾದ ಗಣೇಶ್ ಕೈಕುರೆ, ಜೇಸಿಐ ಕಡಬ ಕದಂಬ ಜೇಸಿಐ ಘಟಕಾಧ್ಯಕ್ಷರಾದ ತಸ್ಲೀಂ ಮರ್ಧಾಳ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷರಾದ ನಾಗರಾಜ್ ಎನ್.ಕೆ., ಮರ್ಧಾಳ ಸೈಂಟ್ ಮೇರಿಸ್ ಪ್ರೌಢ ಶಾಲೆಯ ಮುಖ್ಯಗುರುಗಳಾದ ಈಶೋ ಪಿಲಿಫ್, ಮರ್ಧಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ದೇವಕಿ, ಜೇಸಿಐ ಕಡಬ ಕದಂಬ ನಿಕಟಪುರ್ವ ಅಧ್ಯಕ್ಷ ಜಯರಾಮ ಆರ್ತಿಲ, ಮಾಜಿ ಅಧ್ಯಕ್ಷರಾದ ಅಶೋಕ್ ಕಡಬ, ದಿನೇಶ್ ಆಚಾರ್ಯ, ಸದಸ್ಯರಾದ ಪ್ರಕಾಶ್ ಎನ್.ಕೆ. ತಿರುಮಲೇಶ್ವರ ಭಟ್, ಜಯರಾಮ ಮೂರಾಜೆ, ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಜಯಂತಿ, ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಹಿರಿಯ ಆರೋಗ್ಯ ಸಹಾಯಕಿಯರಾದ ಆನ್ಸಿ, ಮರಿಯಮ್ಮ, ರಾಹೆಲ್, ಮಥುರ, ಅನ್ನಮ್ಮ, ರಾಜೇಶ್ವರಿ, ಎಲಿಯಮ್ಮ, ದಯಾಕಿರಣ್, ಆಶಾ ಕಾರ್ಯಕರ್ತರಾದ ಅನಿತಾ ಬಲ್ಯ, ವಿನೋದ ಕುಬಲಾಡಿ, ಲೋಲಾಕ್ಷಿ ಕುಟ್ರುಪ್ಪಾಡಿ, ಲೀಲಾವತಿ ನೂಜಿಬಾಳ್ತಿಲ, ಸುಧಾ ರೆಂಜಿಲಾಡಿ, ಜಾನ್ಸಿ ನೆಕ್ಕಿಲಾಡಿ, ಮಿನಿಬೆನ್ನಿ ಕುಟ್ರುಪ್ಪಾಡಿ, ಮರಿಯಮ್ಮ ನೂಜಿಬಾಳ್ತಿಲ, ದೇವಕಿ ನೆಕ್ಕಿಲಾಡಿ, ಉಷಾಪ್ರಭು,ಭಾಗವಹಿಸಿದರು. ಜಾಥಾವು ಮರ್ಧಾಳ ಸೈಂಟ್ ಮೇರಿಸ್ ಪ್ರೌಢ ಶಾಲೆಯಿಂದ ಮರ್ಧಾಳ ಪೇಟೆಯ ಮೂಲಕ ಸಂಚರಿಸಿ ಕರಪತ್ರ ಹಂಚಲಾಯಿತು. ಸೈಂಟ್ ಮೇರಿಸ್ ಪ್ರೌಢ ಶಾಲೆ ಹಾಗೂ ಮರ್ಧಾಳ ಸ.ಹಿ.ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು. ಸೈಂಟ್ ಮೇರಿಸ್ ಪ್ರೌಢ ಶಾಲೆಯ ಮುಖ್ಯಗುರುಗಳಾದ ಈಶೋ ಪಿಲಿಫ್ ಸ್ವಾಗತಿಸಿ, ಜೇಸಿಐ ಕಡಬ ಕದಂಬ ಜೇಸಿಐ ಘಟಕಾಧ್ಯಕ್ಷರಾದ ತಸ್ಲೀಂ ಮರ್ಧಾಳ ವಂದಿಸಿದರು.

error: Content is protected !!
Scroll to Top