ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್  BF.7 ಅಬ್ಬರದ ನಡುವೆಯೇ ದೇಶಾದ್ಯಂತ 163 ಹೊಸ ಕೋವಿಡ್-19 ಸೋಂಕು ಪತ್ತೆ   

(ನ್ಯೂಸ್ ಕಡಬ) newskadaba.com  ಚೀನಾ, ಅಮೆರಿಕ ಮತ್ತು ಬ್ರಿಟನ್ ನಲ್ಲಿ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್  BF.7 ಅಬ್ಬರದ ನಡುವೆಯೇ ದೇಶಾದ್ಯಂತ 163 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 163 ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,76,678) ದಾಖಲಾಗಿದ್ದು, 24 ಗಂಟೆಗಳ ಅವಧಿಯಲ್ಲಿ ಒಂಬತ್ತು ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಮಹಾಮಾರಿಗೆ ಬಲಿಯಾದವರ ಸಂಖ್ಯೆ 5,30,690ಕ್ಕೆ ಏರಿಕೆಯಾಗಿದೆ. ಆದರೆ ರಾಷ್ಟ್ರೀಯ COVID-19 ಚೇತರಿಕೆ ದರವು 98.80 ಪ್ರತಿಶತಕ್ಕೆ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.

Also Read  ನದಿಯಲ್ಲಿ ಮುಳುಗಿ ಭಾರತೀಯರು ಸಹಿತ 8 ಮಂದಿ ಮೃತ್ಯು

 

 

 

 

error: Content is protected !!
Scroll to Top