ದಕ್ಷಿಣ ಕನ್ನಡ  : ಲೋನ್​ಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ    ➤  ಸಹಕಾರಿ ಸಂಘದ ಸಿಬ್ಬಂದಿಗೆ ಗೂಸಾ ನೀಡಿದ ಗ್ರಾಹಕರು                               

(ನ್ಯೂಸ್ ಕಡಬ) newskadaba.com  ದಕ್ಷಿಣ ಕನ್ನಡ, ಡಿ.23.  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡುರು ವ್ಯವಸಾಯ ಸಹಕಾರಿ ಸಂಘದಲ್ಲಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ ಕೇಳಿಬಂದಿದೆ. ಸಹಕಾರಿ ಸಂಘದ ಕಚೇರಿಯಲ್ಲಿ ಸಿಬ್ಬಂದಿ ಮತ್ತು ಗ್ರಾಹಕರ ಮಧ್ಯೆ ಹೈಡ್ರಾಮ ನಡೆದಿದೆ ಎಂದು ತಿಳಿದುಬಂದಿದೆ. ಗ್ರಾಹಕರ ಹೆಸರಿನಲ್ಲಿ ಸಂಘದ ಕೆಲ ಪದಾಧಿಕಾರಿಗಳು ಸಾಲ ಪಡೆದ ಆರೋಪ ಮಾಡಲಾಗಿದೆ. ಲೋನ್​ಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಗೋಲ್ ಮಾಲ್ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬ್ಯಾಂಕ್​ಗೆ ಬಂದು ಸಿಬ್ಬಂದಿಯನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾತಿನ ಚಕಮಕಿ ನಡೆದು ಸಹಕಾರಿ ಸಂಘದ ಸಿಬ್ಬಂದಿಗೆ ಗ್ರಾಹಕರು ಗೂಸಾ ನೀಡಿದ್ದಾರೆ. ಈಗಾಗಲೇ ಗೋಲ್ ಮಾಲ್ ಪ್ರಕರಣ ಹೈ ಕೋರ್ಟ್ ‌ಮೆಟ್ಟಿಲೇರಿದೆ. ಎಂಟು ವಾರಗಳಲ್ಲಿ ತನಿಖೆ ನಡೆಸಿ ವರದಿ ನೀಡಲು ಹೈ ಕೋರ್ಟ್ ಮಂಗಳೂರಿನ ಸಹಕಾರಿ ಸಂಘಗಳ ನಿಬಂಧಕರಿಗೆ ಸೂಚಿಸಿದೆ. ಈ ಮಧ್ಯೆ ಸಂಘದ ಕಚೇರಿಗೆ ಆಗಮಿಸಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಸಿದ್ದರಾಮಯ್ಯ ತಿಥಿ ಪತ್ರಿಕೆ ಪೋಸ್ಟ್..!! - ಬಿಜೆಪಿ ಕಾರ್ಯಕರ್ತನ ವಿರುದ್ಧ ಪ್ರಕರಣ

 

 

 

error: Content is protected !!
Scroll to Top