ಉಡುಪಿ : ಚಲಿಸುತ್ತಿದ್ದ ಸ್ಕೂಟಿಯಲ್ಲಿ ಬೆಂಕಿ ಅವಘಢ     ➤  ಚಾಲಕ ಅಪಾಯದಿಂದ ಪಾರು                

(ನ್ಯೂಸ್ ಕಡಬ) newskadaba.com  ಉಡುಪಿ, ಡಿ.23. ಚಲಿಸುತ್ತಿದ್ದ  ಸ್ಕೂಟಿಯೊಂದು  ಅಚಾನಕ್  ಆಗಿ  ಬಂದ್ ಬಿದ್ದಿದ್ದು, ಏನಾಯ್ತು ಎಂದು ಚಾಲಕ ಇಳಿದು ನೋಡುವಾಗಲೇ ಸ್ಕೂಟಿಗೆ ಬೆಂಕಿ ಹತ್ತಿಕೊಂಡ ಘಟನೆ ಉಡುಪಿಯಲ್ಲಿ ಸಂಭವಿಸಿದೆ.

ಕ್ಷಣಾರ್ಧದಲ್ಲೇ ಜೋರಾಗಿ ಹೊತ್ತಿ ಉರಿದ ಬೆಂಕಿ ಸ್ಕೂಟಿಯನ್ನು ಆಹುತಿ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.  ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿರುವ  ಸೇತುವೆ ಬಳಿ ನಡೆದಿದ್ದು, ಕಾರ್ಕಳ ಮೂಲದವರಿಗೆ ಸೇರಿದ ಸ್ಕೂಟಿ ಇದಾಗಿದೆ ಎಂದು ತಿಳಿದುಬಂದಿದೆ. ಬ್ಯಾಟರಿ  ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Also Read  ಹದಗೆಟ್ಟ ಕಲ್ಲಾಜೆ - ಅಂತಿಬೆಟ್ಟು ರಸ್ತೆಗೆ ಊರವರಿಂದಲೇ ಕಾಯಕಲ್ಪ ► ಸಡಕ್ ರಸ್ತೆಗೆ ಕಾದು ಸುಸ್ತಾಗಿ ಕೊನೆಗೆ ಶ್ರಮದಾನದ ಮೊರೆ ಹೋದ ಗ್ರಾಮಸ್ಥರು

 

 

error: Content is protected !!
Scroll to Top