ಡೀಲರ್ ಮೇಲೆ ಹಲ್ಲೆ ಮಾಡಿ ಬೈಕ್ ದೋಚಿದ ಖದೀಮರು     ➤ 6 ಜನ ಆರೋಪಿಗಳ ಬಂಧನ               

crime, arrest, suspected

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.23  ಗ್ರಾಹಕರ ಸೋಗಿನಲ್ಲಿ ಡೀಲರ್ ಮೇಲೆ ಹಲ್ಲೆ ಮಾಡಿ ರೂ.16 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಬೈಕ್ ಸುಲಿಗೆ ಮಾಡಿದ್ದ 6 ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬೈಕ್ ಡೀಲರ್ ಮೊಹಮ್ಮದ್ ಆಸಿಫ್ ಎಂಬುವವರು ಸುಲಿಗೆ ಬಗ್ಗೆ ದೂರು ನೀಡಿದ್ದರು.

ಬಂಧಿತ ಆರೋಪಗಳನ್ನು ವಿಶ್ವಾಸ್(23), ಜಗನ್ನಾಥ್(21), ಗಜೇಂದ್ರ(34), ಲಿಖಿತ್ ಕುಮಾರ್(29), ಶಶಾಂಕ್(23) ಹಾಗೂ ಪವನ್(21) ಎಂದು ಗುರುತಿಸಲಾಗಿದೆ.

ಆರೋಪಿಗಳು ಪರಾರಿಯಾಗುವ ವೇಳೆ ಕಾರನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು. ಅದನ್ನು ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಚ್ಚಿಟ್ಟಿದ್ದ ಬೈಕ್ ಸಹ ಜಪ್ತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Also Read  ಸೆಂಟ್ರಿಂಗ್ ಶೀಟು ಕಳ್ಳತನ ➤ ಆರು ಮಂದಿಯ ಬಂಧನ

 

error: Content is protected !!
Scroll to Top