ಸ್ವತಃ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿ ಊಟ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ ಜಿ.ಪಂ. ಸಿಇಒ

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಡಿ. 22. ಚಿತ್ರದುರ್ಗ ತಾಲ್ಲೂಕು ಐನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರಘಟ್ಟ ಸರ್ಕಾರಿ ಶಾಲೆಗೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ ಭೇಟಿ ನೀಡಿದರು.

ಈ ವೇಳೆ ಬಿಸಿ ಊಟದ ಬಗ್ಗೆ ಪರಿಶೀಲನೆ ಮಾಡಿ, ಸ್ವತಃ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿ ಊಟ ಸವಿದರು. ಅಲ್ಲದೆ ಊಟ ತುಂಬಾ ರುಚಿಕಾರವಾಗಿದ್ದು ಮತ್ತು ಪೌಷ್ಟಿಕತೆಯಿಂದ ಕೂಡಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಮತ್ತು ಶಿಕ್ಷಕರಿಗೆ ಹಾಗೂ ಅಡಿಗೆ ಸಹಾಯಕ ಮತ್ತು ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಸೇರಿದಂತೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Also Read  ಯಾದಗಿರಿ: ಭೀಕರ ವಾಹನ ಅಪಘಾತ, ಒಂದೇ ಕುಟುಂಬದ ಐವರು ಸಾವು

 

 

 

 

error: Content is protected !!
Scroll to Top