ಭಾರತದಲ್ಲಿ ಪ್ಯಾರಾಸಿಟಮಲ್ ಹಾಗೂ ಕ್ಯಾನ್ಸರ್ ಸೇರಿದಂತೆ 107 ಔಷಧಿಗಳ ಬೆಲೆ ಇಳಿಕೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ. 22. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು 107 ಔಷಧಗಳ ಬೆಲೆಯನ್ನು ಇಳಿಕೆ ಮಾಡಿ, ದೇಶದಾದ್ಯಂತ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.

 

ಈ ವರ್ಷ ಎರಡನೇ ಬಾರಿಗೆ ಪ್ಯಾರಸಿಟಮಲ್ ಸೇರಿ ಇತರ ಅಗತ್ಯ ಔಷಧಿಗಳ ಬೆಲೆ ಕಡಿಮೆ ಮಾಡಲಾಗಿದ್ದು, ಮಾಂಟೆಲುಕಾಸ್ಟ್ ಮತ್ತು ಮೆಟ್ಫಾರ್ಮಿನ್ ನಂತಹ ಕೆಲವು ಔಷಧಿಗಳ ಬೆಲೆಗಳನ್ನ ಹೆಚ್ಚಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ನ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್, ‘ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಪ್ಯಾರಾಸಿಟಮಲ್’ನಂತಹ ಕೆಲವು ಔಷಧಿಗಳು ಈಗಾಗಲೇ ಕಡಿಮೆ ಬೆಲೆಗಳನ್ನ ಕಂಡಿದ್ದು. ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ಬೆಲೆ ಏರಿಕೆಯಾಗುತ್ತಿರುವುದರಿಂದ, ತಯಾರಕರಿಗೆ ಬೆಲೆಗಳನ್ನ ಮತ್ತಷ್ಟು ಕಡಿತಗೊಳಿಸಲು ಅವಕಾಶವಿದೆ ಎಂದಿದ್ದಾರೆ.

Also Read  ದುಬೈಗೆ ಹೊರಟಿದ್ದ ವಿಮಾನದಲ್ಲಿ ಹೊಗೆ..!

error: Content is protected !!
Scroll to Top