ಸುಳ್ಯ: ಟಿಪ್ಪರ್ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ನ.27. ಟಿಪ್ಪರ್ ವಾಹನವನ್ನು ಓವರ್ ಟೇಕ್ ಮಾಡುತ್ತಿದ್ದಾಗ ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ ರಸ್ತೆಗೆಸೆಯಲ್ಪಟ್ಟು ಟಿಪ್ಪರ್ ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯದಲ್ಲಿ ಸೋಮವಾರದಂದು ನಡೆದಿದೆ.

ಮೃತ ಸವಾರನನ್ನು ಆಲಂಕಲ್ಯ ನಿವಾಸಿ ವೆಂಕಪ್ಪ ಗೌಡ ಎಂಬವರ ಪುತ್ರ ಅವಿನ್ ಎಂದು ಗುರುತಿಸಲಾಗಿದೆ. ಇವರು ತನ್ನ ಟಿವಿಎಸ್ ವೇಗೋ ವಾಹನದಲ್ಲಿ ತನ್ನ ಅಂಗಡಿಗೆಂದು ತೆರಳುತ್ತಿದ್ದಾಗ ಸುಳ್ಯ ಮೀನು ಮಾರುಕಟ್ಟೆಯ ಸಮೀಪ ಮೀನುಗಳನ್ನು ಇಳಿಸುವ ವಾಹನಗಳು ರಸ್ತೆಯ ಮಧ್ಯಭಾಗದವರೆಗೆ ನಿಂತಿದ್ದವು. ಅದೇ ರಸ್ತೆಯಿಂದಾಗಿ ಸಾಗುತ್ತಿದ್ದ ಟಿಪ್ಪರ್ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಅವಿನ್ ರವರ ವಾಹನದ ಚಕ್ರ ಕಾಂಕ್ರೀಟ್ ರಸ್ತೆಯ ಅಂಚಿಗೆ ಸಿಲುಕಿದ ಕಾರಣ ರಸ್ತೆಗೆಸೆಯಲ್ಪಟ್ಟ ಅವಿನ್ ರವರ ತಲೆಯ ಮೇಲೆ ಟಿಪ್ಪರ್ ನ ಹಿಂಬದಿ ಚಕ್ರ ಹರಿದಿದ್ದು, ಅವಿನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Also Read  ಲಾರಿ-ಬೈಕ್ ಢಿಕ್ಕಿ: ಯುವಕ ಮೃತ್ಯು

ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!
Scroll to Top