ಬ್ರಹ್ಮಪುತ್ರ ನದಿಯಲ್ಲಿ ಸತತ 10 ಗಂಟೆಗಳ ಕಾಲ ಈಜಾಡಿದ ಹುಲಿ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಅಸ್ಸಾಂ, ಡಿ. 22. ಬ್ರಹ್ಮಪುತ್ರ ನದಿಯಲ್ಲಿ ಹುಲಿಯೊಂದು ಸತತ ಹತ್ತು ಗಂಟೆಗಳ ಕಾಲ ಈಜಾಡಿ ಸುಮಾರು 120 ಕಿ.ಮೀ. ದೂರದ ದ್ವೀಪ ತಲುಪಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿ ಹುಲಿಯು ವೇಗವಾಗಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡುತ್ತಿರುವುದು ಕಂಡುಬಂದಿದ್ದು, ಬಳಿಕ ಗುವಾಹಟಿ ಸಮೀಪದ ನವಿಲು ದ್ವೀಪದ ಗುಹೆ ಒಂದರಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ದ್ವೀಪವು ಉಮಾನಂದ ದೇಗುಲದಿಂದ ಪ್ರಖ್ಯಾತವಾಗಿದ್ದು, ಹುಲಿಯನ್ನು ಕಂಡು ದೇಗುಲದ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Also Read  ಮಂಗಳೂರು: ಆರು ತಿಂಗಳಿನಿಂದ ಸಿಗದ ವೇತನ ➤ ಏಕಾಂಗಿ ಧರಣಿ ಕುಳಿತ ವೈದ್ಯ..!

error: Content is protected !!
Scroll to Top