(ನ್ಯೂಸ್ ಕಡಬ) newskadaba.com ಪಿರಿಯಾಪಟ್ಟಣ, ಡಿ. 22. ಸರ್ಕಾರದಿಂದ ನೀಡಲಾಗುವ ರೇಷನ್ ಕಾರ್ಡ್ ಕೇವಲ ಪಡಿತರ ಪಡೆಯಲು ಮಾತ್ರವಲ್ಲ ಆರೋಗ್ಯ ಸಂಬಂಧಿಸಿದ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ ಎಂದು ಶಾಸಕ ಕೆ. ಮಹದೇವ್ ತಿಳಿಸಿದ್ದಾರೆ.
ಆಹಾರ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಆಯ್ದ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಿ ಮಾತನಾಡಿ, ಮುಖ್ಯಮಂತ್ರಿಗಳು ಮತ್ತು ಆಹಾರ ಇಲಾಖೆ ನಿರ್ದೇಶಕರ ಕಚೇರಿಗಳಿಗೆ ಎಡೆಬಿಡದೆ ಅಲೆದು ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಯೋಜನೆ ತಲುಪುವಂತಾಗಬೇಕು. ದುರುಪಯೋಗವಾಗುವುದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.