ಆಧಾರ್ ನೋಂದಣಿದಾರರ ದಾಖಲೆಗಳ ನವೀಕರಣ ಕಡ್ಡಾಯ ➤ ಡಿಸಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 22. ಕಳೆದ 10 ವರ್ಷಗಳಿಗೂ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆ ಪಡೆದ, ಆಧಾರ್ ನೋಂದಣಿದಾರರು ತಮ್ಮ ದಾಖಲೆಗಳ ನವೀಕರಣ ಮಾಡಿಸಿಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಸೂಚಿಸಿದೆ.

ಯುಐಡಿಎಐ ಆಧಾರ್ ಕಾರ್ಡ್‍ಗೆ ನೀಡಲಾದ ಪ್ರಮುಖ ದಾಖಲೆಗಳಾದ ನಿವಾಸದ ವಿಳಾಸ ದೃಢೀಕರಣ ಪತ್ರ, ವ್ಯಕ್ತಿಯ ಗುರುತಿನ ದಾಖಲೆಗಳ ಜತೆಗೆ ಇತರೆ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳಬೇಕು. ಎಲ್ಲಾ ಹಳೆಯ ಆಧಾರ್ ನೋಂದಣಿದಾರರು ತಮ್ಮ ದಾಖಲೆಗಳಲ್ಲಿನ ವಿವರಗಳು ಲೇಟೆಸ್ಟ್ ಆಗಿರುವಂತೆ ನಿಗಾವಹಿಸಬೇಕಿದೆ. ಕಳೆದ 10 ವರ್ಷಗಳಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಆಧಾರ್ ಸಂಖ್ಯೆಯು ಪ್ರಮುಖ ಪಾತ್ರವಹಿಸುತ್ತಿದೆ. ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆಯ ಜೋಡಣೆಯೊಂದಿಗೆ ವಿವಿಧ ಯೋಜನೆಗಳ ಸಹಾಯಧನವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲು  ಸುಲಭವಾಗಿ ಸಾಧ್ಯವಾಗುತ್ತಿದೆ. 10 ವರ್ಷಗಳ ಮುನ್ನ ಆಧಾರ್ ಪಡೆದವರು ಒಂದು ವೇಳೆ ಮಧ್ಯದಲ್ಲಿ ದಾಖಲೆಗಳ ನವೀಕರಣ ಅಥವಾ ಪೂರಕ ಮಾಹಿತಿಗಳ ಪರಿಷ್ಕರಣೆ ಮಾಡಿಸಿದ್ದಲ್ಲಿ ಪುನಃ ನವೀಕರಣ ಮಾಡುವ ಅಗತ್ಯವಿಲ್ಲ. ಒಂದು ಬಾರಿಯೂ ಕೂಡಾ ದಾಖಲೆ, ಮಾಹಿತಿ ತಿದ್ದುಪಡಿ ಮಾಡಿಸದವರು ಮಾತ್ರ ಶೀಘ್ರದಲ್ಲಿ ಸಮೀಪದ ಆಧಾರ್ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಬೇಕು. ದಾಖಲೆಗಳ ನವೀಕರಣದ ನಿಗದಿತ ಶುಲ್ಕವನ್ನು ಕೂಡ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group