ಉಪ್ಪಿನಂಗಡಿ: ದೊಣ್ಣೆಯಿಂದ ಹೊಡೆದು ಹೋಟೆಲ್ ಕಾರ್ಮಿಕನ ಕೊಲೆ ► ಹೋಟೆಲ್ ಮಾಲಿಕ ಕೊಲೆ ಮಾಡಿರುವ ಬಗ್ಗೆ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.26. ಹೋಟೇಲ್ ಕಾರ್ಮಿಕನ ಮೇಲೆ ಹೋಟೆಲ್ ಮಾಲಕ ಇನ್ನಿಬ್ಬರ ಸಹಕಾರದೊಂದಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಕಾರ್ಮಿಕ ಮೃತಪಟ್ಟ ಘಟನೆ ಭಾನುವಾರದಂದು ಲಾವತ್ತಡ್ಕ ಎಂಬಲ್ಲಿ ನಡೆದಿದೆ.

ಮೃತರನ್ನು ಇಚ್ಲಂಪಾಡಿ ಗ್ರಾಮದ ಬಾಕಿಜಾಲು ಮನೆ ನಿವಾಸಿ ಅಣ್ಣಿಪೂಜಾರಿ ಎಂಬವರ ಮನೆ ಅಳಿಯ ಶ್ರೀನಿವಾಸ್ (45) ಎಂದು ಗುರುತಿಸಲಾಗಿದೆ. ನವೆಂಬರ್ 24 ಶುಕ್ರವಾರದಂದು ಸಂಜೆ ಅಡುಗೆ ಕೆಲಸಕ್ಕೆಂದು ಜಾರ್ಜ್ ಎಂಬವರ ಮಾಲಕತ್ವದ ಹೋಟೇಲಿಗೆ ಹೋದವರನ್ನು ಶನಿವಾರದಂದು ಹೋಟೇಲಿನಲ್ಲಿ ಜಾರಿ ಬಿದ್ದಿದ್ದಾರೆಂಬ ಕಾರಣ ನೀಡಿ ಪುತ್ತೂರಿನ ಆಸ್ಪತ್ರೆಗೆ ಜಾರ್ಜ್‍ರನ್ನು ದಾಖಲಿಸಿದ್ದು, ಈ ಬಗ್ಗೆ ಮಾಹಿತಿ ಪಡೆದ ಶ್ರೀನಿವಾಸ್ ರವರ ಮನೆಯವರು ಪುತ್ತೂರಿಗೆ ತೆರಳಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದರು. ಈ ವೇಳೆ ಗಾಯಾಳು ಶ್ರೀನಿವಾಸ್ ತನಗೆ ತನ್ನ ಹೋಟೇಲ್ ಮಾಲಕ ಮತ್ತಿಬ್ಬರ ಜೊತೆ ಸೇರಿಕೊಂಡು ದೊಣ್ಣೆಯಿಂದ ತಲೆಗೆ ಹಾಗೂ ಬೆನ್ನಿಗೆ ಹೊಡೆದಿದ್ದಾರೆಂದೂ ತಿಳಿಸಿರುವುದಾಗಿ ಶ್ರೀನಿವಾಸ್ ರವರ ಮಾವ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿರುವ ಉಪ್ಪಿನಂಗಡಿ ಪೊಲೀಸರು ತೀವ್ರ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Also Read  ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇವರ ಸಹಯೋಗದೊಂದಿಗೆ ➤ `ಸ್ವಚ್ಛತಾ ರಸಪ್ರಶ್ನೆ-2019’

error: Content is protected !!
Scroll to Top