ಓಮೈಕ್ರಾನ್ ನ ಬಿಎಫ್ 7 ಉಪತಳಿ  ➤ ದೇಶದಲ್ಲಿ 4 ಹೊಸ ಪ್ರಕರಣ ಪತ್ತೆ      

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 22. ದೇಶದಲ್ಲಿ ಕೊರೋನಾ ವೈರಸ್ ಓಮೈಕ್ರಾನ್ ನ ಉಪತಳಿ ಬಿಎಫ್7 ಸೋಂಕಿನ ನಾಲ್ಕು ಪ್ರಕರಣಗಳು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ ನಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿದೆ.

ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಈ ಪ್ರಕರಣಗಳನ್ನು ಪತ್ತೆ ಮಾಡಿತು. ಎರಡು ಮತ್ತು ಮೂರನೇ ಪ್ರಕರಣವೂ ಗುಜರಾತ್ ನಲ್ಲಿ ಪತ್ತೆಯಾಗಿದ್ದರೆ, ಮತ್ತೊಂದು ಪ್ರಕರಣ ಒಡಿಶಾದಲ್ಲಿ ವರದಿಯಾಗಿದೆ. ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗಿರುವುದಕ್ಕೆ ವೈರಸ್ ನ ಈ ಬಿಎಫ್.7 ಉಪತಳಿಯೇ ಕಾರಣ ಎಂದು ಮೂಲಗಳು ತಿಳಿಸಿದೆ.

Also Read  ವಿವಾದಿತ ಫೇಸ್‌ಬುಕ್‌ ಪೋಸ್ಟ್ ➤ ಸೌದಿಯ ಜೈಲಿನಲ್ಲಿದ್ದ ಮಂಗಳೂರಿನ ಹರೀಶ್ ಬಂಗೇರ ಬಿಡುಗಡೆ

 

 

 

error: Content is protected !!
Scroll to Top