ವಿಟ್ಲ: ಅಪರಿಚಿತ ಮೃತದೇಹದ ಗುರುತು ಪತ್ತೆ..!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 21. ಗುಡ್ಡದಲ್ಲಿ ಪತ್ತೆಯಾಗಿದ್ದ ಅಪರಿಚಿತ ಕೊಳೆತ ಮೃತದೇಹದ ಗುರುತು ಪತ್ತೆಯಾಗಿದೆ.

ಮೃತರನ್ನು ಪುಣಚ ಗ್ರಾಮದ ಕೆದುಮೂಲೆ ದಿ. ವೀರಪ್ಪ ನಾಯ್ಕ್ ಎಂಬವರ ಪುತ್ರ ಕಮಲಾಕ್ಷ ಎಂದು ಗುರುತಿಸಲಾಗಿದೆ. ಮನೆಯಿಂದ ಕೆಲಸಕ್ಕೆಂದು ತೆರಳುತ್ತಿದ್ದ ಕಮಲಾಕ್ಷ ರವರು ತುಂಬಾ ಸಮಯದವರೆಗೆ ಮನೆಗೆ ಮರಳಿ ಬರುತ್ತಿರಲಿಲ್ಲ. ಹೀಗೇ ಮಾಡುತ್ತಿದ್ದ ಇವರು ಕೆಲದಿನಗಳ ಹಿಂದೆ ಕೆಲಸಕ್ಕೆಂದು ತೆರಳಿ ಬಳಿಕ ಮನೆಗೆ ಹಿಂತಿರುಗಿ ಬರಲಿಲ್ಲ ಎಂದು ಮನೆಯವರು ಮಾಹಿತಿ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಹಿರಿಯಡ್ಕ: ದನದ ಕೊಟ್ಟಿಗೆಯಲ್ಲಿ ಬೆಂಕಿ ಅವಘಡ   ➤ ಮನನೊಂದ ವ್ಯಕ್ತಿ ನೇಣಿಗೆ ಶರಣು            

 

error: Content is protected !!
Scroll to Top