ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಿಸಿದ ಚರ್ಮಗಂಟು ರೋಗ      

(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ, ಡಿ. 21. ದಕ್ಷಿಣ ಹಾಗೂ ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹರಡಿದ್ದ ಚರ್ಮಗಂಟು ರೋಗವು ಉತ್ತರಕನ್ನಡ ಜಿಲ್ಲೆಯ ಬಳಿಕ ಇದೀಗ ದ.ಕ. ಜಿಲ್ಲೆಯಾದ್ಯಂತ ವ್ಯಾಪಿಸಿದ್ದು, ಜಾನುವಾರುಗಳಲ್ಲಿ ರೋಗ ಬಾರದಂತೆ ತಡೆಯಲು ಲಸಿಕೆ ನೀಡುತ್ತಿದ್ದರೂ ರೋಗ ಹರಡುತ್ತಲೇ ಇದ್ದು, ಹೈನುಗಾರರು ಪರದಾಡುವಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುಳಿತ್ತಡಿ, ನಾಗೋಜಿ, ಹಿರೇಬಂಡಾಡಿ ನಾಗನಕೋಡಿ ಸೇರಿದಂತೆ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ 12 ಜಾನುವಾರುಗಳಲ್ಲೂ ರೋಗ ಕಾಣಿಸಿಕೊಂಡಿದೆ. ಇನ್ನು ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಈಗಾಗಲೇ 300 ಲಸಿಕೆಗಳನ್ನು ಕೊಡಲಾಗಿದ್ದು, ಚರ್ಮಗಂಟು ರೋಗವಿದ್ದ ಜಾನುವಾರುಗಳಿಗೆ ಲಸಿಕೆಯ ಬಳಿಕ ಶೇ. 50 ರಷ್ಟು ರೋಗ ಕಡಿಮೆಯಾಗಿದೆ.

Also Read  ಮೈಸೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್ - ಇನ್ನೋವಾ ನಡುವೆ ಢಿಕ್ಕಿ ➤ ಬಂಟ್ವಾಳದ ಇಬ್ಬರು ಗಂಭೀರ

 

error: Content is protected !!
Scroll to Top