ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ವೆಂಕಟೇಶ್ ಪಾಡ್ಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.26. ಪ್ರತಿಷ್ಠಿತ ಜೇಸಿಐ ಕಡಬ ಕದಂಬ ಘಟಕದ ನೂತನ ಘಟಕಾಧ್ಯಕ್ಷರಾಗಿ ವೆಂಕಟೇಶ್ ಪಾಡ್ಲರವರು ಆಯ್ಕೆಯಾಗಿದ್ದಾರೆ.

ನಿಕಟಪೂರ್ವಾಧ್ಯಕ್ಷರಾಗಿ ತಸ್ಲೀಂ ಮರ್ದಾಳ, ಕಾರ್ಯದರ್ಶಿಯಾಗಿ ಮೋಹನ ಕೋಡಿಂಬಾಳ,  ಉಪಾಧ್ಯಕ್ಷರಾಗಿ ರಮೇಶ್ ಕೊಠಾರಿ, ಝಫೀರ್ ಮಹಮ್ಮದ್, ಪ್ರಕಾಶ್ ಎನ್.ಕೆ., ತಿರುಮಲೇಶ್ ಭಟ್‌ ಹೊಸ್ಮಠ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್, ಜತೆ ಕಾರ್ಯದರ್ಶಿಯಾಗಿ ಜಯರಾಮ ಮೂರಾಜೆ, ನಿರ್ದೇಶಕರಾಗಿ ನಿಖಿಲ್ ಶೆಟ್ಟಿ ಕೇಪು, ಮಹೇಶ್ ರೈ ಕುಂಟೋಡಿ, ವೇಣುಗೋಪಾಲ ಕೊಲ್ಲಡ್ಕ, ಡಾ.ರಾಮ್‌ಪ್ರಕಾಶ್, ಯುವ ಜೇಸಿ ಸಂಯೋಜಕರಾಗಿ ರವಿಚಂದ್ರ ಪಡುಬೆಟ್ಟು, ಜೇಸಿರೆಟ್ ಸಂಯೋಜಕರಾಗಿ ದಿವಾಕರ ಎಂ.,  ಆಯ್ಕೆಯಾಗಿದ್ದಾರೆ. ಜೇಸಿರೆಟ್ ಅಧ್ಯಕ್ಷರಾಗಿ ಜೇಸಿರೆಟ್ ರಮ್ಯಾ ವೆಂಕಟೇಶ್, ಯುವಜೇಸಿ ಅಧ್ಯಕ್ಷರಾಗಿ ಕಡಬ ನೂಜಿಬಾಳ್ತಿಲದ ಬೆಥನಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಎನ್.ಆರ್., ಉಪಾಧ್ಯಕ್ಷರಾಗಿ ಸವಿತಾ ಎಸ್., ಕಾರ್ಯದರ್ಶಿಯಾಗಿ ವಿನೀದ್ ಕೆ. ಹಾಗೂ ಕೋಶಾಧಿಕಾರಿಯಾಗಿ ನೋಯಲ್ ಸ್ಕರಿಯಾ  ಆಯ್ಕೆಯಾಗಿದ್ದಾರೆ.

Also Read  ಉಡುಪಿ: ಮಿಲಾಗ್ರಿಸ್ ಹೈಸ್ಕೂಲ್ ವಿದ್ಯಾರ್ಥಿ ನಾಪತ್ತೆ

ನಾಳೆ ಪದಗ್ರಹಣ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನ. 27 ರಂದು ಸಂಜೆ 6.30ಕ್ಕೆ  ಕಡಬದ  ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ  ಜರಗಲಿದೆ. ಮುಖ್ಯಅತಿಥಿಗಳಾಗಿ ಜೇಸಿ ವಲಯಾಧ್ಯಕ್ಷ ರಾಕೇಶ್ ಕುಂಜೂರು ಹಾಗೂ  ನೂಜಿಬಾಳ್ತಿಲದ ಬೆಥನಿ ಪ್ರೌಢಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಭಟ್, ಪದಗ್ರಹಣ ಅಧಿಕಾರಿಯಾಗಿ ವಲಯ ಉಪಾಧ್ಯಕ್ಷ  ಸುಬ್ರಹ್ಮಣ್ಯದ ರವಿ ಕಕ್ಕೆಪದವು ಅವರು ಆಗಮಿಸಲಿದ್ದಾರೆ ಎಂದು ಜೇಸಿ ಪ್ರಕಟನೆ ತಿಳಿಸಿದೆ.

error: Content is protected !!
Scroll to Top