(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಟ್ರಾನ್ಸ್ ಪೋರ್ಟ್ ಫಾರ್ ಆಲ್ ಎಂಬ ಸವಾಲಿನ ಮೂಲಕ ಸಾರ್ವಜನಿಕ ಸಾರಿಗೆ ಉಪಯೋಗಿಸುತ್ತಿರುವ ನಾಗರಿಕರು ಎದುರಿಸುತ್ತಿರುವ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮವೊಂದನ್ನು ಕೈಗೊಳ್ಳಲಾಗುತ್ತಿದೆ. ಟ್ರಾನ್ಸ್ ಪೋರ್ಟ್ ಫಾರ್ ಆಲ್ ಹಂತ-2 ರಲ್ಲಿ ಡಿಜಿಟಲ್ ಪರಿಹಾರಗಳನ್ನು ವಿನ್ಯಾಸಗೊಳಿಸಿ ಸಾರ್ವಜನಿಕ ಸಾರಿಗೆಯಲ್ಲಿ ಬದಲಾವಣೆಗಳನ್ನು ತರಲು ಮಂಗಳೂರು ನಗರದ ಸ್ಥಳೀಯ ಸ್ಟಾರ್ಟ್ ಅಪ್ ಗಳು ಭಾಗವಹಿಸಲು ಅವಕಾಶ ಕಲ್ಪಿಸಿ, ಅರ್ಜಿ ಆಹ್ವಾನಿಸಲಾಗಿದೆ.
ಸೂಕ್ತ ಡಿಜಿಟಲ್ ಪರಿಹಾರ ಸೂಚಿಸುವ ವಿಜೇತರಿಗೆ 20 ಲಕ್ಷ ರೂ.ಗಳ ಬಹುಮಾನ ನೀಡಲಾಗುವುದು ಹಾಗೂ ವಿಜೇತ ಸ್ಮಾರ್ಟ್‍ಆ್ಯಪ್‍ಗಳು ಈ ಡಿಜಿಟಲ್ ಪರಿಹಾರವನ್ನು ಪ್ರಾಯೋಗಿಕವಾಗಿ ನಗರದಲ್ಲಿ ಅಳವಡಿಸಲು ಅರ್ಹರಾಗುತ್ತಾರೆ. ಈ ಸಂಬಂಧ ನಗರದ ಸ್ಮಾರ್ಟ್ ಆಯಪ್‍ಗಳು https://bit.ly/3EbbScU ಲಿಂಕ್ ಅಥವಾ www.transport4all.in ಪೋರ್ಟಲ್ ಮೂಲಕ ಸೈನ್ ಆಪ್ ಮಾಡಿ ಈ ಸವಾಲಿನಲ್ಲಿ ಇದೇ ಡಿ.31ರೊಳಗೆ ಭಾಗವಹಿಸಬಹುದಾಗಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.