ರಸ್ತೆ ದುರಸ್ತಿಗೆ ರೂ.2.69 ಕೋಟಿ ಅನುದಾನ ಬಿಡುಗಡೆ  ➤ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್  

(ನ್ಯೂಸ್ ಕಡಬ) newskadaba.com ದೊಡ್ಡ ಬಳ್ಳಾಪುರ, ಡಿ. 21. ಗುಂಡಿ ಬಿದ್ದ ರಸ್ತೆಗಳ ದುರಸ್ತಿಗೆ ಸರ್ಕಾರದಿಂದ 2.69 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಮಳೆಯಿಂದ ತಾಲ್ಲೂಕಿನಲ್ಲಿ 35 ಕಿ.ಮೀ. ಉದ್ದದ 23 ರಸ್ತೆಗಳು ಹಾಳಾಗಿದೆ, ಮಾಕಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದ ಕಾರಣ ಗ್ರಾಮಸ್ಥರಿಗೆ ಸಂಪರ್ಕ ಇಲ್ಲವಾಗಿದೆ. ತ್ವರಿತವಾಗಿ ದುರಸ್ತಿ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆದರು. ಕ್ಷೇತ್ರದಲ್ಲಿ 844 ಕಿ.ಮೀ. ಉದ್ದದಷ್ಟು ಜಿಲ್ಲಾ ಪಂಚಾಯಿತಿ ರಸ್ತೆ ಇದೆ. ಇದರಲ್ಲಿ 374 ಕಿ.ಮೀ. ರಸ್ತೆಯನ್ನು ಹಿಂದಿನ ಸರ್ಕಾರದಲ್ಲಿ ಡಾಂಬರೀಕರಣ ಮಾಡಿಸಲಾಗಿದೆ. ಆದರೆ, ಮಣ್ಣಿನ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯಾವುದೇ ಅನುದಾನ ನೀಡಿಲ್ಲ ಎಂದರು.

Also Read  ನಾವೂರು: ವಾಟ್ಸಾಪ್ ಬಳಗದಿಂದ ಸಸಿ ವಿತರಣೆ, ವನಮಹೋತ್ಸವ

 

 

error: Content is protected !!
Scroll to Top