ಪುತ್ತೂರು: ಕಾಂಕ್ರೀಟ್ ಮಿಶ್ರಣದ ಲಾರಿ ಪಲ್ಟಿ ➤ ಕಾರ್ಮಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 21. ರಸ್ತೆ ಬದಿ ಕುಸಿದ ಪರಿಣಾಮ ರಸ್ತೆ ಅಭಿವೃದ್ದಿ ಕಾಮಗಾರಿಗೆಂದು ಬಂದಿದ್ದ ಕಾಂಕ್ರೀಟ್ ಮಿಕ್ಸಿಂಗ್ ಮಿಲ್ಲರ್ ಲಾರಿಯು ಪಲ್ಟಿಯಾದ ಘಟನೆ ಚೆಲ್ಯಡ್ಯ ಎಂಬಲ್ಲಿ ನಡೆದಿದೆ.

ಕಾಂಕ್ರೀಟ್ ಮಿಕ್ಸಿಂಗ್ ತುಂಬಿಸಿಕೊಂಡು ಪುತ್ತೂರು ಕಡೆಯಿಂದ ಬಂದ ಲಾರಿಯು ರಸ್ತೆ ಬದಿ ನಿಲ್ಲಿಸಿ ತಡೆಗೋಡೆಗೆ ಕಾಂಕ್ರೀಟ್ ತುಂಬಿಸುವ ಸಂದರ್ಭ ರಸ್ತೆ ಬದಿ ಕುಸಿದು ಲಾರಿಯು ಸುಮಾರು ಇಪ್ಪತ್ತು ಅಡಿ ಆಳಕ್ಕೆ ಪಲ್ಟಿಯಾಗಿದೆನ್ನಲಾಗಿದೆ. ಕೆಳಭಾಗದಲ್ಲಿದ್ದ ಕಾರ್ಮಿಕರು ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Also Read  ಮಂಗಳೂರು : ಶಾಸಕ ಯು.ಟಿ ಖಾದರ್ ಗೆ ವಂಚಿಸಲು ಯತ್ನ..!!      ➤ ಆರೋಪಿಯ ವಿರುದ್ದ ದೂರು ದಾಖಲು              

error: Content is protected !!
Scroll to Top