(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಗುಜರಾತ್ ನ ಗ್ರೀನ್ ಮೃಗಾಲಯದಿಂದ ಮಧ್ಯ ಮತ್ತು ದಕ್ಷಿಣ ಅಮೇರಿಕ, ಬ್ರೆಜಿಲ್, ಅರ್ಜೆಂಟೀನ, ಆಪ್ರೀಕಾ ಖಂಡಗಳಲ್ಲಿ ಕಾಣಸಿಗುವ ವಿವಿಧ ಪ್ರಾಣಿಗಳನ್ನು ತರಲಾಗಿದೆ.
ಸಣ್ಣ ಜಾತಿಯ ಅಳಿಲು, ಕಪಿ, ಮಾರ್ಮೋಸೆಟ್, ಕೆಂಪು ಕೈಯ ಟೆಮಾರನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ಪರದೇಶದ ಪಕ್ಷಿಗಳನ್ನು ತರಿಸಲಾಗಿದೆ. ಹೊಸದಾಗಿ ಬಂದ ಅತಿಧಿಗಳ ಅರೋಗ್ಯವನ್ನು ಪರಿಶೀಲಿಸಲು ಮತ್ತು ಇಲ್ಲಿನ ವಾತಾವರಣಕ್ಕೆ ಒಗ್ಗುವ ತನಕ ಕ್ವಾರೆಂಟೈನ್ ನಲ್ಲಿ ಇಡಲಾಗಿದೆ ಎಂದು ತಿಳಿದು ಬಂದಿದೆ.