(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 21. ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಬೇಕಾಗಿರುವ 17,176 ಕೋಟಿ ರೂ.ವನ್ನು ಬಾಕಿ ಉಳಿಸಿಕೊಂಡಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿ, ಕೇಂದ್ರವು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಪಾವತಿಯನ್ನು ಜೂನ್ ನಲ್ಲಿ ನಿಲ್ಲಿಸಿದ್ದು, ಬಾಕಿ ಮೊತ್ತವು ಕಳೆದ ಜೂನ್ ತಿಂಗಳಿಗೆ ಸಂಬಂಧಿಸಿದ್ದು. ಸಂವಿಧಾನದ ನಿಬಂಧನೆ ಪ್ರಕಾರ 5 ವರ್ಷ ರಾಜ್ಯಗಳಿಗೆ ಜಿಎಸ್‌ಟಿ ಪಾವತಿಸಲು ಕೇಂದ್ರ ಬದ್ಧವಾಗಿದ್ದು, ಈ ಅವಧಿಯು ಜೂನ್ 30ಕ್ಕೆ ಕೊನೆಗೊಂಡಿದೆ. ಹೀಗಾಗಿ, ಜೂನ್‌ವರೆಗಿನ ಎಲ್ಲ ಬಾಕಿಯನ್ನು ಪಾವತಿಸಲಾಗಿದೆ ಎಂದು ತಿಳಿಸಿದರು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಆದಾಯದ ಮೇಲೆ ಹೊಡೆತ ಬಿದ್ದಿರುವ ಕಾರಣ ಕನಿಷ್ಠ ಒಂದೆರಡು ವರ್ಷಗಳವರೆಗೆ ಪರಿಹಾರ ಮುಂದುವರಿಸಲು ಜೂನ್ ನಲ್ಲಿ ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಸಮಿತಿಯ 47ನೇ ಸಭೆಯಲ್ಲಿ ರಾಜ್ಯ ಸರಕಾರವು ಕೇಳಿತ್ತು. ಆದರೆ ಜೂನ್ ತನಕ ಪರಿಹಾರ ನೀಡುತ್ತೇವೆಯೇ ಹೊರತು ಆ ಬಳಿಕ ಮುಂದುವರಿಸುವುದಿಲ್ಲ ಎಂಬುವುದು ಕೇಂದ್ರ ಸರಕಾರದ ನಿಲುವಾಗಿತ್ತು.