ನಟಿ ಉರ್ಫಿ ಜಾವೇದ್ ಬಂಧನ..?

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 21. ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಉರ್ಫಿ ಜಾವೇದ್ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಇತ್ತೀಚೆಗೆ ದುಬೈಗೆ ಭೇಟಿ ನೀಡಿರುವ ಈಕೆ, ಅಲ್ಲಿಯೂ ಅರೆಬರೆ ಮೈಮಾಟ ಪ್ರದರ್ಶಿಸುತ್ತಾ ವಿಡಿಯೋ ಶೂಟ್ ಮಾಡುತ್ತಿದ್ದು, ದುಬೈನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆಗೆ ಆಸ್ಪದವಿಲ್ಲದ ಕಾರಣ ಅರೆಬೆತ್ತಲೆ ದೇಶ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಫ್ಯಾಶನ್​ ಇನ್ಫ್ಲುಯೆನ್ಸರ್​ ಉರ್ಫಿ ಅವರನ್ನು ಮಂಗಳವಾರದಂದು ದುಬೈ ಅಧಿಕಾರಿಗಳು ಬಂಧಿಸಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ. ಆದರೆ, ಈ ಸುದ್ದಿಯ ಬಗ್ಗೆ ಉರ್ಫಿ ಆಪ್ತ ಮೂಲಗಳು ಖಚಿತ ಮಾಹಿತಿ ನೀಡಿಲ್ಲ.

Also Read  ಸೂಕ್ತ ಪರವಾನಗಿ ಇಲ್ಲದೇ ಸಂಗ್ರಹಿಸಿಡಲಾದ್ದ 40 ಕೆ.ಜಿ ಪಟಾಕಿ ಪೊಲೀಸ್ ವಶಕ್ಕೆ

error: Content is protected !!
Scroll to Top