ಆರೋಗ್ಯ ಇಲಾಖೆಯಲ್ಲಿ 550ಕ್ಕೂ ಹೆಚ್ಚು ಹುದ್ದೆಗಳು ➤ ಹೊರಗುತ್ತಿಗೆ ಆಧಾರದ ಮೂಲಕ ನೇಮಕಾತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 550ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಹುದ್ದೆಗಳನ್ನು ಭರ್ತಿ ಮಾಡಲು 400 ಫಾರ್ಮಸಿ ಅಧಿಕಾರಿಗಳು ಹಾಗೂ 150 ಕಿರಿಯ ಪ್ರಯೋಗಶಾಲೆ ತಾಂತ್ರಿಕ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

 

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗದ ವಿಶೇಷ ನೇಮಕಾತಿ ಸಮಿತಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹೊರಡಿಸಿರುವ ಸೂಚನಾ ಪತ್ರವನ್ನು ಸಚಿವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಅಲ್ಪಾವಧಿ ಟೆಂಡರ್ ಕರೆದು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Also Read  ಕುಟ್ರುಪಾಡಿ: ಗ್ರಾ.ಪಂ.ನಲ್ಲಿ ಪೈಪು ಖರೀದಿ ಅವ್ಯವಹಾರ ಪ್ರಕರಣ; ಹಿಂದಿನ ಪಿಡಿಒರವರಿಗೆ ನಿರೀಕ್ಷಣಾ ಜಾಮೀನು

error: Content is protected !!
Scroll to Top