ವಿಟ್ಲ: ಅಪರಿಚಿತ ಮೃತದೇಹ ಪತ್ತೆ ➤ ಆತ್ಮಹತ್ಯೆ ಶಂಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 21. ಗುಡ್ಡದಲ್ಲಿ ಕೊಳೆತ ಅಪರಿಚಿತ ಮೃತದೇಹವೊಂದು ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ವರದಿಯಾಗಿದೆ.

ಎಂದಿನಂತೆ ಸೊಪ್ಪು ತರಲು ಗುಡ್ಡಕ್ಕೆ ತೆರಳಿದ ಸ್ಥಳೀಯರಿಗೆ ಮೊದಲು ಮೊಬೈಲ್ ಹಾಗೂ ಟ್ರಾವೆಲ್ ಬ್ಯಾಗ್ ಕಾಣಿಸಿದ್ದು, ಅಕ್ಕಪಕ್ಕ ಪರಿಶೀಲನೆ ನಡೆಸಿದಾಗ ಪಕ್ಕದಲ್ಲಿ ಮರದಲ್ಲಿ ಬಳ್ಳಿಯೊಂದು ನೇತಾಡುತ್ತಿದ್ದು, ಅಪರಿಚಿತ ಮೃತದೇಹ ನೆಲದಲ್ಲಿ ಬಿದ್ದುಕೊಂಡಿತ್ತು ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!
Scroll to Top