ಮಂಗಳೂರು: ಅಕ್ರಮವಾಗಿ ಮಾದಕ ಔಷಧ ಮಾರುತ್ತಿದ್ದ ಮೆಡಿಕಲ್ ಸೆಂಟರ್ ► ಕೇಂದ್ರ ರೌಡಿ ನಿಗ್ರಹ ದಳದಿಂದ ದಿಢೀರ್ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ನ.25. ಅಕ್ರಮವಾಗಿ ಮಾದಕ ಔಷಧವನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ನಗರದ ಕೇಂದ್ರ ರೌಡಿ ನಿಗ್ರಹ ದಳದ ಪೊಲೀಸರು ಮಾಧಕ ಔಷಧಿಯನ್ನು ವಶಪಡಿಸಿಕೊಂಡ ಘಟನೆ ಶನಿವಾರದಂದು ನಗರದ ಯೆಯ್ಯಾಡಿಯಲ್ಲಿ ನಡೆದಿದೆ.

ಯೆಯ್ಯಾಡಿ ಜಂಕ್ಷನ್ ನಲ್ಲಿರುವ ಪ್ರಜ್ವಲ್ ಮೆಡಿಕಲ್ಸ್ ನಲ್ಲಿ ‌ಯಾವುದೇ ಪರವಾನಿಗೆ ಇಲ್ಲದೆ ಮತ್ತು ಕಾನೂನು ಬಾಹಿರವಾಗಿ ವೈದ್ಯರ ಸಲಹಾ ಚೀಟಿ ಇಲ್ಲದೆ NITROSUN ಎಂಬ ಮಾಧಕ ಔಷಧವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರದ ಕೇಂದ್ರ ರೌಡಿ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ‌ಮಾದಕ ಔಷಧಿಗಳನ್ನು ಮಾರಾಟ ಮಾಡುವುದು ಕಂಡು ಬಂದಿದೆಯೆನ್ನಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

Also Read  PSI ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ➤ ಹಣ ಕೇಳಿ ವಂಚಿಸಿದ ಕಿರಾತಕ

ಕಾರ್ಯಾಚರಣೆಯಲ್ಲಿ ಕೇಂದ್ರ ಉಪವಿಭಾಗದ ಎ.ಸಿ.ಪಿ ಉದಯ ನಾಯಕ್ ಮತ್ತು ಕೇಂದ್ರ ರೌಡಿ ನಿಗ್ರಹದಳದ ಪೊಲೀಸ್ ನಿರೀಕ್ಷಕರಾದ ರವೀಶ್ ನಾಯಕ್ ಹಾಗೂ ಸಿಬ್ಬಂದಿಗಳು, ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!
Scroll to Top