ಉಮ್ರಾ ಯಾತ್ರೆಗೆ ತೆರಳಿದ್ದ ಕಡಬದ ರಿಕ್ಷಾ ಚಾಲಕನಿಗೆ ಹೃದಯಾಘಾತ ➤ ಪವಿತ್ರ ಮಕ್ಕಾದಲ್ಲಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಡಿ.21. ಪವಿತ್ರ ಉಮ್ರಾ ಯಾತ್ರೆಗೆಂದು ತೆರಳಿದ್ದ ಕಡಬದ ವ್ಯಕ್ತಿಯೋರ್ವರು ಮಕ್ಕಾದಲ್ಲಿ ನಿಧನರಾದ ಬಗ್ಗೆ ವರದಿಯಾಗಿದೆ.

ಕಡಬದ ಕೋಡಿಂಬಾಳದ ನಿವಾಸಿ, ಆಟೋ ಚಾಲಕರಾಗಿದ್ದ ಅಬೂಬಕ್ಕರ್ ಎಂಬವರು ತನ್ನ ಪತ್ನಿ ಸೇರಿದಂತೆ ನಲ್ವತ್ತು ಜನರ ತಂಡದೊಂದಿಗೆ ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿದ್ದರು. ಸೌದಿ ಅರೇಬಿಯಾದ ಮಕ್ಕಾದಲ್ಲಿ ಅಬೂಬಕ್ಕರ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು. ಉಮ್ರಾ ಮತ್ತು ಹಜ್‌ಯಾತ್ರೆ ಸಮಯದಲ್ಲಿ ಮಕ್ಕಾದಲ್ಲಿ ಮೃತಪಡುವುದು ಮುಸ್ಲಿಂ ಪದ್ದತಿ ಪ್ರಕಾರ ಅತ್ಯಂತ ವಿರಳ ಮತ್ತು ಪುಣ್ಯಕಾರ್ಯ ಎನ್ನಲಾಗಿದೆ. ಮೃತದೇಹವನ್ನು ಮಕ್ಕಾದಲ್ಲೇ ದಫನಕ್ರಿಯೆ ಮಾಡಲಾಗುವುದೆಂದು ತಿಳಿದು ಬಂದಿದೆ.

Also Read  ತೂಫಾನ್- ಕೆಎಸ್ಆರ್ಟಿಸಿ ಬಸ್ ಢಿಕ್ಕಿ ► 6 ಮಂದಿ ಸ್ಥಳದಲ್ಲೇ ಮೃತ್ಯು

 

error: Content is protected !!
Scroll to Top