(ನ್ಯೂಸ್ ಕಡಬ) newskadaba.com, ಲಂಡನ್ ಡಿ. 17 ಉದ್ಯೋಗ ನಿಮಿತ್ತ ಲಂಡನ್ ಗೆ ತೆರಳಿದ್ದ ಕೇರಳ ಮೂಲದ ನರ್ಸ್ ಮತ್ತು ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಪೂರ್ವ ಇಂಗ್ಲೆಂಡ್ ನ ನಾರ್ಥಾಂಪ್ಪನ್ ಪ್ರದೇಶದಲ್ಲಿ ನಡೆದಿದೆ.
ಭಾರತೀಯ ಮೂಲದ ಮಹಿಳೆ ಮತ್ತು ಅವರ ಇಬ್ಬರು ಮಕ್ಕಳು ಮನೆಯಲ್ಲಿ ಗಂಭೀರವಾದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ಕೊಟ್ಟಾಯಂನ 40 ವರ್ಷದ ನರ್ಸ್, ಆರು ವರ್ಷದ ಮಗ, ಹಾಗೂ ನಾಲ್ಕು ವರ್ಷದ ಮಗಳು ಕೊಲೆಗಿಡಾದವರು ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಲಂಡನ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.