(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 20 ಮಂಗಳೂರು ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಭರ್ಜರಿಯಾಗಿ ಏರಿಕೆ ಕಾಣುತ್ತಿದ್ದು, ಕೋವಿಡ್ ಬಳಿಕ ನಿರಂತರವಾಗಿ ಹೆಚ್ಚುತ್ತಲೆ ಇದೆ. ದ.ಕ , ಉಡುಪಿ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿ ಹೊಂದಿರುವ ಮಂಗಳೂರು ಕೇಂದ್ರೀಯ ತೆರಿಗೆಗಳ ಆಯುಕ್ತಾಲಯದ ಮಾಹಿತಿ ಪ್ರಕಾರ 2021-22 ಸಾಲಿನಲ್ಲಿ ಗುರಿ ಮೀರಿದ ಸಾಧನೆಯಾಗಿದೆ.
ಜಿಎಸ್ ಟಿ ಸಂಗ್ರಹದಲ್ಲಿ ಪೆಟ್ರೋಲಿಯಂ ಉತ್ಪನ್ನಗಳದ್ದೇ ಸಿಂಹ ಪಾಲು. 2021 -22ರಲ್ಲಿ 696.69 ಕೋಟಿ ರೂ. ಇದ್ದ ಸಂಗ್ರಹವು 2022-23 ನೇ ಸಾಲಿನ ಅಕ್ಟೋಬರ್ ವರೆಗಿನ ಲೆಕ್ಕಚಾರದಂತೆ 1049.34 ಕೋಟಿ ರೂ. ನಷ್ಟು ಏರಿಕೆ ಕಂಡಿದೆ.
ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ನಾಗರಿಕರಲ್ಲಿ ತೆರಿಗೆ ಶಿಸ್ತು ಉತ್ತಮವಾಗಿದೆ. ಜಿ ಎಸ್.ಟಿ ಕುರಿತು ವ್ಯಾಜ್ಯಗಳೂ ಕನಿಷ್ಟ ವೆ ಇನ್ನೂ ಕಸ್ಟಮ್ಸ್ ಹಾಗೂ ಇತರ ತೆರಿಗೆ ಎಲ್ಲವೂ ಉತ್ತಮವಾಗಿದ್ದು, ಸಾಧನೆಯ ಹಾದಿ ತಲುಪಲು ಸಾಧ್ಯವಾಗಿದೆ ಎಂದು ಜಿಎಸ್ ಟಿ ಆಯುಕ್ತ ಮಾದುದ್ದೀನ್ ಅಹ್ಮದ್ ತಿಳಿಸಿದರು.