➤ ನವಜಾತ ಅಂಗವೈಕಲ್ಯ ಶಿಶುವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು

(ನ್ಯೂಸ್ ಕಡಬ) newskadaba.com ಕಾರವಾರ , ಡಿ. 20  ನವಜಾತ ಅಂಗವಿಕಲ ಶಿಶುವೊಂದನ್ನು ಬಾಕ್ಸ್ ನಲ್ಲಿ ಹಾಕಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ಗುಡ್ಡೆಕೊಪ್ಪಕ್ಕೆ ತೆರಳುವ ತ್ಯಾರ್ಸಿ-ತಡಕೇರಿ ತಿರುವಿನಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನವಜಾತ ಮಗು ಸಿಕ್ಕಿರುವ ಜಾಗಕ್ಕೆ ಪೊಲೀಸರು ಬಂದು, ಮಹಿಳಾ ಮತ್ತು ಶಿಶು ಕಲ್ಯಾಣ ಅಧಿಕಾರಿ ಪೂರ್ಣಿಮಾ ಆರ್. ದೊಡ್ಡನಿ ಅವರಿಗೆ ಮಾಹಿತಿ ನೀಡಿದ್ದಾರೆ. ರಸ್ತೆ ಬದಿಯಲ್ಲಿ ಸಿಕ್ಕಿರುವ ಮಗು ಅಂಗವೈಕಲ್ಯ ಹೊಂದಿತ್ತು. ಹೀಗಾಗಿ ಪೋಷಕರು ಮಗುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Also Read  ಬಿಬಿಸಿ ಮೇಲೆ ಐಟಿ ದಾಳಿ ➤ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ!

error: Content is protected !!
Scroll to Top